ಬಂಟ್ವಾಳ: ಕನ್ನಡ ಚಿತ್ರ ರಂಗದ ಖ್ಯಾತ ನಟರು ಗುರುವಾರ ಸಂಜೆ ಬಿ.ಸಿ.ರೋಡ್ ಸಮೀಪದ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗಾ ಜಲಂತರ್ಗತ ನಾಗ ಸಾನಿಧ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಭಿನಯ ಚಕ್ರವರ್ತಿ, ಬಿಗ್‍ಬಾಸ್‍ನ ನಿರೂಪಕ, ನಟ ಕಿಚ್ಚ ಸುದೀಪ್, ಖಳನಾಯಕ ನಟ ರವಿಶಂಖರ್, ರವೀಶ್ ರವರು ನಾಗ ಸಾನಿಧ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಳಯದ ಮುಖ್ಯಸ್ಥ ಗುರುದತ್ ಶೆಣೈ, ಪಾಂಡುರಂಗ ಶಣೈ, ಭೂಮಿಕ ಶಣೈ, ರಾಜೇಶ್ ಭಟ್ ಬಿ.ಸಿ.ರೋಡ್, ಪುಷ್ಪರಾಜ್ ಮೊದಲಾದವರು ನಟರನ್ನು ಸ್ವಾಗತಿಸಿದರು.

