ಬಂಟ್ವಾಳ: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಗ್ರಾಮೀಣ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿಕೊಂಡು ಬಂದಿದೆ.ಈ ನಿಟ್ಟಿನಲ್ಲಿ ನವೆಂಬರ್ 5 ಮತ್ತು 6 ರಂದು ಪ್ರೇರಣಾ 2016 ಎಂಬ ಎರಡು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ರೋಟರಿ ಕ್ಲಬ್ ಬಂಟ್ವಾಳ ಇದರ ಸಹಯೋಗದೊಂದಿಗೆ ಬಂಟ್ವಾಳದ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಶಂಭೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.

education-logo-1

ಕಾರ್ಯಕ್ರಮವನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿರುವ ಡಾ|ಕೆ.ಜಿ.ಜಗದೀಶ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖಾ ಉಪ ನಿರ್ದೇಶಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ.

ನ.5ರಂದು ಡಾ. ಅರುಣ್ ಇಸ್ಲೂರು ಅವರು ಮಕ್ಕಳ ಜತೆ ಪರಿಸರ ಮತ್ತು ಅದರ ಸಂರಕ್ಷಣೆ ಎಂಬ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ ಪ್ರೊ.ವೇದವ್ಯಾಸ್ ಅವರು ಸಸ್ಯ ಸಂಪತ್ತು ಎಂಬ ವಿಷಯದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳ ಜತೆ ಸಂಭಾಷಣೆ ನಡೆಸಲಿದ್ದಾರೆ. ಡಾ.ರವಿಪ್ರಕಾಶ್ ಅವರು ಶಿಕ್ಷಕರಿಗೆ ಆರೋಗ್ಯ ವಿಷಯದಲ್ಲಿ ಮಾಹಿತಿ ನೀಡಲಿದ್ದಾರೆ.

ನ.6ರಂದು ಡಾ.ಹರೀಶ್ ಭಟ್ ಅವರಿಂದ ವಿಜ್ಞಾನ ಬೆಳೆದು ಬಂದ ಹಾದಿ ಎನ್ನು ವಿಷಯದಲ್ಲಿ ಚರ್ಚಿಸಲಿದ್ದಾರೆ.ಇದೆಲ್ಲದರ ಜೊತೆಗೆ ನಾಟಕಗಳು,ರಸಪ್ರಶ್ನೆ ಮತ್ತು ಮಾದರಿ ತಯಾರಿಕೆ ಕಾರ್ಯಕ್ರಮಗಳು ನಡೆಯಲಿವೆ.

By suddi9

Leave a Reply

Your email address will not be published. Required fields are marked *