ಬಂಟ್ವಾಳ : ಬಂಟರ ಸಂಘ ಬಂಟ್ವಾಳ ಇದರ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಕರ್ನಾಟಕ ಸರಕಾರದ ಮುಖ್ಯ ಮಂತ್ರಿಯವರಾದ ಸಿದ್ದರಾಮಯ್ಯರವರನ್ನು ತುಂಬೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ , ತುಂಬೆ ಪಂ.ನ ಮಾಜಿ ಉಪಾಧ್ಯಕ್ಷ ಗೋಪಾಲ್ ಕೃಷ್ಣ ತುಂಬೆ, ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ, ತುಂಬೆ ಅಭಿಮಾನಿ ಬಳಗದ ಅಧ್ಯಕ್ಷ ದೇವದಾಸ್ ಪರ್ಲಕ್ಕೆ, ಕಮಲ್ ರಾಮಲ್ ಕಟ್ಟೆ, ಗಣೇಶ್ ಸಾಲ್ಯಾನ್ , ಉಮರ್ ತುಂಬೆ, ಆದಂ ಕುಂಞ, ಉಸ್ಮಾರ್ ಕಾಣೆಮಾರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

