ಮೂಡುಬಿದಿರೆ: ತನ್ನ ಹಿರಿಯರ ಮನೆಯಲ್ಲಿ ವಾಸವಿದ್ದ ಸಹೋದರಿಯನ್ನು ಸ್ವತಃ ಒಡಹುಟ್ಟಿದ ಸಹೋದರನೇ ಪತ್ನಿ ಹಾಗೂ ಇತರ ಮೂವರ ನೆರವಿನೊಂದಿಗೆ ಸೇರಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಡ್ಡೋಡಿ ಕಲ್ಲಕುಮೇರು ಶೆಣೈಹಿತ್ಲಿನ ಡೈನಾ ಅರಾನ್ಹಾ ಅವರ ಮನೆಗೆ ಅ29ರ ಶನಿವಾರ ಅಪರಾಹ್ನ ಸಹೋದರ ಸುನಿಲ್ ಅರಾನ್ನಾ, ಅವರ ಪತ್ನಿ ಶಾಂತಿ ಮೀರಾ ಅರಾನ್ಹಾ ಜತೆಗೆ ಸುಂದರ ಪೂಜಾರಿ, ಸನತ್ ಶೆಟ್ಟಿ ಹಾಗೂ ರಾಜೇಶ್ ಶೆಟ್ಟಿ ಸೇರಿಕೊಂಡು ಹಲ್ಲೆ ನಡೆಸಿ ಮನೆಯಿಂದ ಹೊರದಬ್ಬಿ ಕತ್ತಿಹಿಂದ ಕಡಿದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ದೂರು ನೀಡಿದ್ದಾರೆ.

