ಮೂಡುಬಿದಿರೆ: ಕಲ್ಲಬೆಟ್ಟು ಗ್ರಾಮದ ಗಂಟಾಲ್‍ಕಟ್ಟೆ ನೀರಲ್ಕೆ ಎಂಬಲ್ಲಿ ಹಾಡಿಯಲ್ಲಿ ಅಕ್ರಮವಾಗಿ ಕಟ್ಟಿಹಾಕಲಾದ ಐದು ಹಸುಗಳನ್ನು ಸೋಮವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡಕೊಂಡಿದ್ದಾರೆ.
ನೀರಲ್ಕೆಯ ಹಾಡಿಯಲ್ಲಿ ಅಕ್ರಮವಾಗಿ ದನಗಳನ್ನು ಕಟ್ಟಿ ಹಾಕಲಾಗಿದ್ದು ಕಸಾಯಿಖಾನೆಗೆ ಬಳಕೆ ಮಾಡಲಾಗುವುದೆಂದು ಅನುಮಾನ ವ್ಯಕ್ತಪಡಿಸಿ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾರೀಸುದಾರರಿಲ್ಲದ ಐದು ಹಸುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

