ಬಂಟ್ವಾಳ: ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಇವರ ಆಶ್ರಯದಲ್ಲಿ, ಬದನಡಿ ರವೀಂದ್ರ ಪೂಜಾರಿ ಸಾರಥ್ಯದಲ್ಲಿ, ದಿನೇಶ್ ಸುವರ್ಣ ನಿರ್ದೇಶನದಲ್ಲಿ “ಷಣ್ಮುಖ ಕಲಾ ತಂಡ ಬದನಡಿ ಕೊಯಿಲ” ಇದರ 50 ನೇ ಪ್ರದರ್ಶನದ ಸವಿನೆನಪಿನ ಸಮಾರಂಭ ಕೈತೋಡಿ ಕ್ವಾಟ್ರಸ್ ಮೈದಾನದಲ್ಲಿ ನ.5 ಶನಿವಾರದಂದು “ಷಣ್ಮುಖ ಸಂಭ್ರಮ” ಕಾರ್ಯಕ್ರಮ ಜರಗಲಿದೆ.

26-vp-shanmukha-kala-tanda

ಈ ಸಂದರ್ಭದಲ್ಲಿ ದಿ| ಸಂತೋಷ್ ಕುಮಾರ್ ಭಂಡಾರಿ ಇವರ ನೆನಪಿನ ಸಲುವಾಗಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ತನಕ ಯೆನೆಪೋಯ ಮೆಡಿಕಲ್ ಕಾಲೇಜ್ ಮತ್ತು ಯೆನೆಪೋಯ ಡೆಂಟಲ್ ಕಾಲೇಜ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಬದನಡಿ ಆಡಳಿತ ಮೋಕ್ತೇಸರ ಸುಂದರ ಹೊಳ್ಳ ಬದನಡಿ, ಅನಂತ ಪದ್ಮನಾಭ ಹೆಲ್ತ್ ಸೆಂಟರ್ ಡಾ|ಸುದೀಪ್ ಕುಮಾರ್, ಸಂಚಾಲಕ ಬಸವರಾಜ್ ರಾಯಿ, ಸರಕಾರಿ ಆರೋಗ್ಯ ಕೇಂದ್ರ ರಾಯಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿರುವರು.

ಸಂಜೆ 6 ರಿಂದ ಊರಿನ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ “ಐಸಿರ ರಂಗ ಕಲಾ ಪ್ರದರ್ಶನ” ಹಾಗೂ ಸಂಜೆ 7ರಿಂದ 50 ನೇ ವರ್ಷದ ಸಂಭ್ರಮ- ಸನ್ಮಾನ ಕಾರ್ಯಕ್ರಮದ ಅಂಗವಾಗಿ ನಮ್ಮ ಬಂಟ್ವಾಳ ಪತ್ರಿಕೆ ಸಂಪಾದಕ ಗೋಪಾಲ್ ಅಂಚನ್ ಹಾಗೂ ಪ್ರಜಾವಾಣಿ ಪತ್ರಿಕೆ ಸಂಪಾದಕ ಮೋಹನ್ ಶ್ರೀಯಾನ್ ಹಾಗೂ ಲಕುಮಿ ತಂಡದ ನಿರ್ದೇಶಕ ಎಲ್‍ಎನ್ ಕಿಶೋರ್ ಡಿ.ಶೆಟ್ಟಿ, ರಂಗಭೂಮಿ ಕಲಾವಿದ ತುಳುವ ಬೊಳ್ಳಿ ಎಚ್ ಕೆ ನೈನಾಡ್, ಮಹೇಶ್ ಕರ್ಕೆರ, ರಾಜ್ ಪಾಲ್ ಕಲ್ಲಡ್ಕ, ಬಲೆ ತೆಲಿಪಾಲೆ ಕಲಾವಿದ ಸಂದೀಪ್ ಶೆಟ್ಟಿ ರಾಯಿ, ಲೋಕೇಶ್ ಕೈತ್ರೋಡಿ ಕ್ವಾಟ್ರಾಸ್ ಸನ್ಮಾನಿಸಲಿರುವರು.

ಈ ಸಂದರ್ಭ 7.30ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಕರ್ನಾಟಕ ಸರಕಾರ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉದ್ಯಮಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಉಪನ್ಯಾಸಕ ಅಕ್ಷಯ ಗೋಖಲೆ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹಾಗೂ ಮುಖ್ಯ ಅತಿಥಿಗಳಾಗಿ ಎಮ್ ಜೆ ಎಫ್ ದೇವಪ್ಪ ಶೆಟ್ಟಿ ಮಾವಂತೂರು, ನಿತ್ಯಾನಂದ ಪೂಜಾರಿ ಕೆಂತಲೆ, ಹರ್ಷವರ್ಧನ ಪಡಿವಾಳ್, ಬೇಬಿ ಕುಂದರ್, ಶ್ರೀನಿವಾಸ್ ಸಪಲ್ಯ, ರಮೇಶ್ ಶೆಟ್ಟಿ ಮಜಲೋಡಿ, ತುಂಗಪ್ಪ ಬಂಗೇರ, ವಿಶ್ವನಾಥ್ ಕೋಟ್ಯಾನ್ ಅಳಿಯೂರು, ರಂಜಿತ್ ಪೂಜಾರಿ ಮೂಡಬಿದ್ರೆ, ಪ್ರಕಾಶ್ ಅಂಚನ್, ವಿಶ್ವೇಶ್ವರ ಎನ್ ಎಮ್, ಮೋಹನ್ ಜಿ ಮೂಲ್ಯ, ನಿರುಪಮ ಎಸ್ ಭಂಡಾರಿ, ದುರ್ಗಾದಾಸ್ ಶೆಟ್ಟಿ ಮಾವಂತೂರು, ವಸಂತ ಅನ್ನಳಿಕೆ, ಸಂತೋಷ್ ಕುಮಾರ್ ಚೌಟ ಮಡಂದೂರು, ಸಂತೋಷ್ ಕುಮಾರ ಬೆಟ್ಟು ರಾಯಿ, ರಶ್ಮಿತ್ ಭಂಡಾರಿ ಕೈತ್ರೋಡಿ, ಸವಿನ್ ಕುಮಾರ್ ಜೈನ್ ಕೊಯಿಲ, ಹೇಮಚಂದ್ರ ಸಿದ್ಧಕಟ್ಟೆ, ದಿನೇಶ್ ಶೆಟ್ಟಿ ದಂಬೆದಾರು, ಸತೀಶ್ ಆಚಾರ್ಯ ಬೆಂಗಳೂರು, ಉದಯ ಕುಮಾರ್ ಕೊಯಿಲ, ಪ್ರವೀಣ್ ಅಂಚನ್ ಕೊಯಿಲ, ಪ್ರಶಾಂತ್ ಶೆಟ್ಟಿ ಬಾಕ್ಯಾರಕೋಡಿ, ಮಂಜುಳಾ, ದಯಾನಂದ ಸಪಲ್ಯ ಉಪಸ್ಥಿತರಿರುವರು.

ರಾತ್ರಿ 10ರಿಂದ ನಾದ -ನೃತ್ಯ- ಗಾನ-ಮಿಲನ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ಶ್ರೀ ಷಣ್ಮುಖ ಕಲಾ ತಂಡ ಬದನಡಿ ಸಂಚಾಲಕ ರವೀಂದ್ರ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *