ಬಂಟ್ವಾಳ: ಕುಲಾಲರ ದೃಷ್ಟಿ ಸರ್ವಜ್ವನ ಕಡೆ ಇರಬೇಕು , ಸರ್ವಜ್ವನ ನಡಿಗೆ ಕುಲಾಲರ ನಡಿಗೆಯಾಗಬೇಕು, ಸರ್ವಜ್ವ ಜಯಂತಿ ಮೂಲೆ ಮೂಲೆಗಳಲ್ಲಿ ಆಚರಣೆಯಾಗಬೇಕು, ಕುಲಾಲ ಯುವ ವೇದಿಕೆ ಸರ್ವಜ್ವನನ್ನು ಸ್ಪೂರ್ತಿಯಾಗಿಟ್ಟುಕೊಂಡು ಹೋರಾಟ ಮಾಡಬೇಕು ಎಂದು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸಂಸ್ಥಾಪಕ, ಬೆಂಗಳೂರು ರಾಜ್ಯ ಕುಂಬಾರರ ಮಹಾ ಸಂಘದ ರಾಜ್ಯ ಕಾರ್ಯಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಹೇಳಿದರು.
ಅವರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಮತ್ತು ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನಸಭೆ ಆಶ್ರಯದಲ್ಲಿ ನೂತನ ಕಾರ್ಯಕಾರಿ ಮಂಡಳಿ ಪದಗ್ರಹಣ ಮತ್ತು ಕುಲಾಲ ಕುಂಬಾರರ ಯುವ ಸಮ್ಮಿಲನ 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಲಾಲರು ಜಾತ್ಯಾತೀತ ಸಮುದಾಯದವರು , ಎಲ್ಲಾ ಸಮುದಾಯದವರೊಂದಿಗೆ ಬೆರತು ಕೊಂಡು ನಂಬಿದವರಿಗೆ ಯಾವತ್ತು ಮೋಸ ಮಾಡದ ಜನ .ಸಾಮಾಜಿಕ ಅಸಮಾನತೆಯನ್ನು ತೊಲಗಿಸುವ ಕೆಲಸವನ್ನು ಮಾಡಲು ನಾವೆಲ್ಲರೂ ಮುಂದೆ ಬರಬೇಕಾಗಿದೆ. ಆ ದಿಕ್ಕಿನಲ್ಲಿ ಕೆಲಸ ಮಾಡುವ ಕುಲಾಲರ ಯುವ ವೇದಿಕೆಗೆ ಸಹಕಾರವನ್ನು ನಾವು ನೀಡಬೇಕಾಗಿದೆ.
ಜಿಲ್ಲೆಯಲ್ಲಿ ಪ್ರತಿ ಮನೆ ಮನೆ ಬೇಟಿ ನೀಡಿ ಪ್ರಥಮ ,ದ್ವಿತೀಯ ಮತ್ತು ತೃತೀಯ ಹಂತದ ನಾಯಕರನ್ನು ಸರ್ವೆ ಮಾಡುವ ಕೆಲಸ ಮಾಡುತ್ತದೆ. ಜೊತೆಗೆ ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ಅವರ ಪ್ರತಿಭೆಯನ್ನು ಅನಾವರಣ ಗೊಳಿಸುಲಾಗುತ್ತದೆ , ಅ ಮೂಲಕ ಯುವ ವೇದಿಕೆ ಯುವಕರನ್ನು ಮುಂಚೂಣಿಗೆ ತಂದು ಕಿಂಗ್ ಮೇಕರ್ ಮಾಡುವ ಕೆಲಸ ಮಾಡಲಾಗುತ್ತಿದೆ. ರಾಜಕೀಯವಾಗಿ ಕುಲಾಲ ಸಮುದಾಯದವರಿಗೆ ಅನ್ಯಾಯವಾಗಿದೆ. ಎಲ್ಲಾ ಪಕ್ಷಗಳು ಚುನಾವಣೆ ಬಂದಾಗ ಒಲೈಕೆ ಕೆಲಸ ಮಾತ್ರ ಆಗುತ್ತಿದೆ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬದಲಾವಣೆಯ ಗಾಳಿ ತರಬಲ್ಲ ಶಕ್ತಿ ಬಂಟ್ವಾಳ ಕುಲಾಲರಿಂದ ಆಗಬೇಕಾಗಿದೆ. ಬದಲಾವಣೆಯ ದಾರಿ ಬಂಟ್ವಾಳದಿಂದ ನಾಂದಿಯಾಗಲಿ ಎಂದರು. ಯುವ ಸಮುದಾಯ ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಕೆಲಸವನ್ನು ಮೈಗೂಡಿಸಿಕೊಳ್ಳಿ ಅ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಅವಕಾಶ ಹೆಚ್ಚು ಎಂದರು.
ಕರಾವಳಿ ಯುವ ವೇದಿಕೆಯ ರಾಜ್ಯಧ್ಯಕ್ಷ ತೇಜಸ್ವಿರಾಜ್ ಮಾತನಾಡಿ ರಾಜಕೀಯ ಶಕ್ತಿ ಇಲ್ಲದೆ ಯಾವುದೇ ಸಂಘಟನೆ ಬೆಳೆಯಲು ಸಾಧ್ಯವಿಲ್ಲ, ಕುಲಾಲ ಯುವ ಸಮುದಾಯ ರಾಜಕೀಯ ಮುಂದೆ ಬರುವ ಮೂಲಕ ಸಂಘಟನೆಯನ್ನು ಮಾಡಿ ಸಮುದಾಯಕ್ಕೆ ಕೊಡುಗೆ ನೀಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತಯೆನ್ನು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನ ಸಭೆಯ ಅಧ್ಯಕ್ಷ ನಾರಾಯಣ ಸಿ.ಪೆರ್ನೆ ವಹಿಸಿದ್ದರು. ವೇದಿಕೆಯಲ್ಲಿ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಮಂಗಳುರು ವಿಭಾಗೀಯ ಅಧ್ಯಕ್ಷ ಮೋಹಿತ್ ಕುಲಾಲ್ ಕದ್ರಿ ಕಂಬಳ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಜಿಲ್ಲಾಧ್ಯಕ್ಷ ಜಯೇಶ್‍ಗೋವಿಂದ್, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಕರಾವಳಿ ವಿಭಾಗದ ವಿಭಾಗೀಯ ಕಾರ್ಯಧ್ಯಕ್ಷ ಅಶೋಕ್ ಕುಲಾಲ್ ಕೂಳೂರು, ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಕರ್ನಾಟಕ ರಾಜ್ಯ ಕುಂಬಾರರ ಮಹಿಳಾ ಸಂಘ ಬೆಂಗಳೂರು ರಾಜ್ಯ ಉಪಾಧ್ಯಕ್ಷೆ ಯಶೋಧ ಬಿ. ಬಂಟ್ವಾಳ ಉಪವಿಭಾಗದ ಅಬಕಾರಿ ಉಪನಿರೀಕ್ಷಕಿ ಕು| ಸುಜಾತ, ಸಿವಿಲ್ ಇಂಜಿನಿಯರ್ ಪ್ರಕಾಶ್ ಕೈಕಂಬ ಮಂಗಳೂರು ಮಾತೃ ಸಂಘದ ಅಧ್ಯಕ್ಷ ಸುಧೀರ್ ಕುಡುಪು, ನಿಕಟ ಪೂರ್ವ ಕಾರ್ಯದರ್ಶಿ ಲಕ್ಷಣ್ ಅಗ್ರಬೈಲು, ವಲಯ ಸಂಚಾಲಕ ಸತೀಶ್ ಮೂಲ್ಯ ಜಕ್ರಿಬೆಟ್ಟು, ಕೋಶಾಧಿಕಾರಿ ಮಾಧವ ಕುಲಾಲ್, ಉಪಾಧ್ಯಕ್ಷರುಗಳಾದ ಸುಕುಮಾರ್ ಬಂಟ್ವಾಳ, ಜಯೇಶ್ ಕಲ್ಲಡ್ಕ, ಸಂಘಟನಾ ಕಾರ್ಯದಶಿ, ಉಮೇಶ್ ಆರ್ ಮೂಲ್ಯ , ಕ್ರೀಡಾ ಕಾರ್ಯದರ್ಶಿ ಡಾ| ಬಾಲಕೃಷ್ಣ ಅಗ್ರಬೈಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಾಂಕು ಮೂಲ್ಯ, ಡಾ| ಅಣ್ಣಯ್ಯ ಕುಲಾಲ್ ಮತ್ತು ಡಿ.ಎಂ.ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ನಿಕಟ ಪೂರ್ವ ಅಧ್ಯಕ್ಷ ಅನಂದ ಕುಲಾಲ್ ಮಿತ್ತ ಪರಾರಿ ಪ್ರಸ್ತಾವಿಸಿದರು, ಪ್ರ. ಕಾರ್ಯದರ್ಶಿ ಸತೀಶ್ ಸಂಪಾಜೆ ಸ್ವಾಗತಿಸಿ, ಸತೀಶ್ ಪಲ್ಲಮಜಲು ವಂದಿಸಿದರು. ಎಚ್.ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

