ವಿಟ್ಲ: ಅಪ್ರಾಪ್ತ ಯುವಕ – ಯುವತಿಯರಿಬ್ಬರು ಕೆಲವು ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಗರ್ಭಿಣಿಯಾಗಿ ಹಿಂದಿರುಗಿದ ಘಟನೆಗೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ.

images

ವಿಟ್ಲ ಠಾಣಾ ವ್ಯಾಪ್ತಿಯ 14 ವರ್ಷದ ಬಾಲಕಿ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕ ಕೆಲವು ಸಮಯದ ಹಿಂದೆ ಮನೆ ಬಿಟ್ಟು ಹೋಗಿದ್ದರು. ಇಬ್ಬರೂ ಸಂಬಂಧಿಗಳಾಗಿದ್ದರಿಂದ ಮನೆಯವರು ಯಾವುದೇ ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿರಲಿಲ್ಲ.

ಕೆಲವು ದಿನಗಳ ಹಿಂದೆ ಇಬ್ಬರು ಮನೆಗೆ ಹಿಂದಿರುಗಿದ್ದು, ಬಾಲಕಿಯ ತಾಯಿಯ ಅನುಮಾನದ ಮೇರೆಗೆ ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ತೆರಳಿದ್ದಾರೆ. 2 ತಿಂಗಳ ಗರ್ಭಿಣಿಯಾದ್ದರಿಂದ ಆಸ್ಪತ್ರೆಯಿಂದ ಠಾಣೆಗೆ ಮಾಹಿತಿ ಬಂದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *