ಹೊಸದಿಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸೇತುವೆಯಂತೆ ಕೆಲಸ ಮಾಡುವ ಪ್ರಮುಖ ಅಂತರ್ ರಾಜ್ಯ ಮಂಡಳಿಯನ್ನು ಅ.18ರಂದು ಪುನರ್ ರಚಿಸಲಾಗಿದೆ. ಇದರಿಂದ ಇತ್ತೀಚೆಗಷ್ಟೇ ಪ್ರಮುಖ ಖಾತೆಗಳನ್ನು ಕಳೆದುಕೊಂಡಿದ್ದ ಸಾಂಕಿಕ ಮತ್ತು ಯೋಜನೆ ಅನುಷ್ಟಾನ ಸಚಿವ ಡಿ.ವಿ ಸದಾನಂದ ಗೌಡ ಮತ್ತು ಜವುಳಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಇಬ್ಬರನ್ನು ಅಂತರ್ ರಾಜ್ಯ ಮಂಡಳಿಯಿಂದ ಕೈಬಿಡಲಾಗಿದೆ.


