ಬಂಟ್ವಾಳ: ಬಂಟ್ವಾಳ-ವಿಲ್ಲಪುರಂ ಹೆದ್ದಾರಿಯ ಬಿ.ಸಿ.ರೋಡ್ ಮುಖ್ಯ ವೃತ್ತದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಸ್ತೆಯ ಅಲ್ಲಲ್ಲಿ ಬಿದ್ದಿದ್ದ ಹೊಂಡವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಡಾಂಬರೀಕರಣಗೊಳಿಸಿ ಸುಸ್ಥಿತಿಗೆ ತಂದಿದ್ದಾರೆ.

ಹೆದ್ದಾರಿ ಇಲಾಖಾಧಿಕಾರಿಗಳ ಉದಾಸೀನತೆಯನ್ನು ರಾಜ್ಯದ ದೊರೆಯ ಗಮನಸೆಳೆಯುವ ನಿಟ್ಟಿನಲ್ಲಿ ಪುರಸಭೆಯ ಸದಸ್ಯರಾದ ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಅವರು ಅ. 9ರಂದು ಬಂಟ್ವಾಳಕ್ಕೆ ಆಗಮಿಸುವ ಮುಖ್ಯಮಂತ್ರಿಯವರ ಕಾರು ಬರುವ ಹಾದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಅವರು 15 ದಿನಗಳ ಒಳಗಾಗಿ ರಸ್ತೆಯನ್ನು ಡಾಂಬರೀಕರಣಗೊಳಿಸಿ ಸುಸ್ತಿಗೆ ತರುವುದಾಗಿ ಕೊಟ್ಟ ಮಾತಿನಂತೆ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ಎಸ್ಪಿ ಅವರು ನೀಡಿದ ಮಾತಿನಂತೆ ಬುಧವಾರ ಬಂಟ್ವಾಳದಿಂದ ಬೈಪಾಸ್ ಜಂಕ್ಷನ್ ತನಕ ಈ ರಸ್ತೆಯನ್ನು ಪರಿಶೀಲಿಸಿದರು. ಈ ನಡುವೆ ಹೆದ್ದಾರಿ ಇಲಾಖೆ ಮಂಗಳವಾರ ಹಾಗೂ ಬುಧವಾರದಂದು ಈ ರಸ್ತೆಯ ಅಲ್ಲಲ್ಲಿ ಬಿದ್ದಿದ್ದ ಹೊಂಡವನ್ನು ಡಾಂಬರೀಕರಣಗೊಳಿಸಿ ಸುಸ್ಥಿತಿಗೆ ತಂದಿದೆ.  ಎಸ್ಪಿಯವರ ಭೇಟಿಯ ವೇಳೆ ಡಿವೈಎಸ್ಪಿ ರವೀಶ್, ಎಸ್ಸೈ ನಂದಕುಮಾರ್ ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
.

By Suddi9

Leave a Reply

Your email address will not be published. Required fields are marked *