ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್, ಲಿಯೋ ಕ್ಲಬ್ ಮತ್ತು ವಿಟ್ಲ ಸರಲಾರಿ ಪ್ರಥಮ ದರ್ಜೆ ಕಾಲೇಜು ಇದರ ಸಹಯೋಗದೊಂದಿಗೆ ಕಾಲೇಜಿನಲ್ಲಿ `ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಮತ್ತು ಯುವ ಸಬಲೀಕರಣ’ ಮಾಹಿತಿ ಕಾರ್ಯಕ್ರಮವು ನಡೆಯಿತು.
ಕೇಪು ಕಲ್ಲಂಗಳ ಪ್ರೌಢ ಶಾಲೆಯ ರಮೇಶ್ ಬಾಯಾರ್ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಸುದರ್ಶನ ಜೈನ್, ಪ್ರಾಂಶುಪಾಲ ಶಂಕರ ಪಾಟಾಳಿ, ಲಯನೆಸ್ ಅಧ್ಯಕ್ಷೆ ಲೀನಾ ರೋಡ್ರಿಗಸ್ ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ವಂದಿಸಿದರು.

