ವಿಟ್ಲ : ಸರಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತಾ ಸರಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ತೆಗಿಸಿಕೊಡುವ ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ ಎಂದು ಅನಂತಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಂ.ಅಬ್ಬಾಸ್ ಅಲಿ ಯವರು ನುಡಿದರು.

ಅರಣ್ಯ ಸಚಿವರಾದ ಶ್ರೀ ಬಿ.ರಮಾನಾಥ ರೈ ಯವರು ಈ ಭಾಗದ ಶಾಸಕರಾದ ನಂತರ ಅಭಿವೃದ್ಧಿಯಲ್ಲಿ ಮತ್ತು ಸೌಹಾರ್ದತೆಯಲ್ಲಿ ಹಲವಾರು ಮಹತ್ತರ ಬದಲಾವಣೆಗಳಾಗಿದ್ದು ನಾಗರಿಕರು ಈ ಬಗ್ಗೆ ಉತ್ತೇಜಿತರಾಗಿದ್ದಾರೆ ಎಂದರು.
ಪಕ್ಷದ ಸಂಘಟನೆಯ ಅಗತ್ಯತೆಯನ್ನು ತಿಳಿಸಿದರು. ವಲಯ ಸಮಿತಿ , ಬೂತ್ ಸಮಿತಿಗಳನ್ನು ಪುನರ್ ರಚಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ಈ ಭಾಗದಲ್ಲಿ ನಡೆದಿರುವ ಮತ್ತು ಮುಂದೆ ಆಗ ತಕ್ಕ ಕೆಲಸಗಳ ಬಗ್ಗೆ ವಿವಿರಿಸಿದರು. ಸಭೆಯನ್ನುದ್ದೇಶೀಸಿ ಮಾತನಾಡಿದ ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮಾಧವ ಮಾವೆ, ಸಂಕಪ್ಪ ರೈ , ನಾರಾಯಣ ಸಲ್ಯಾನ್, ಜಯಂತಿ ಮಾತನಾಡಿದರು.ಸಭೆಯಲ್ಲಿ ವಲಯಾಧ್ಯಕ್ಷ ಸತೀಶ್, ಜಗ ದೀಶ್ ಗೌಡ ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಸ್ವಾಗತಿಸಿ , ವಂದಿಸಿದರು.
