ವಿಟ್ಲ: ಚಂದಳಿಕೆ ದ ಕ ಜಿ ಪಂ ಹಿ ಪ್ರಾ ಶಾಲೆ ಇಲ್ಲಿ ನಡೆದ, ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿಠಲ ಪದವಿ ಪೂರ್ವ ಕಾಲೇಜು ಇದರ ವಾರ್ಷಿಕ ಶಿಬಿರ 2016 – 17 ರ ಸಮಾರೋಪ ಸಮಾರಂಭದಲ್ಲಿ ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರು ರವರು ಶಿಕರೋಪನ್ಯಾಸ ನೀಡಿದರು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ ಎಸ್ ಆದರ್ಶ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಜೇಸೀಐ ಅಧ್ಯಕ್ಷ ಬಾಬು ಕೆ ವಿ ವಿಠಲ, ಹಾಗೂ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಚಂದಳಿಕೆ ಶಾಲೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಗೌರವಾಧ್ಯಕ್ಷ ಅಮ್ಮು ಶೆಟ್ಟಿ, ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾವತಿ ಬಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ, ಚಾರ್ಲಿ ಸಿಕ್ವೇರಾ ಮತ್ತು ಸಹಶಿಬಿರಾಧಿಕಾರಿ ಸುವೇತನ್ ಜೈನ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಗೆ ಮತ್ತು ಆಯೋಜಕರಿಗೆ ಚಂದಳಿಕೆ ಊರವರ ಪರವಾಗಿ ಸುಶಾಂತ್ ಸಾಲಿಯಾನ್ ಕೃತಜ್ಞತೆ ಸಲ್ಲಿಸಿದರು. ವಿಕ್ಟರ್ ಲೋಬೋ ಸ್ವಾಗತಿಸಿದರು. ಶಿಬಿರಾಧಿಕಾರಿ ಅಣ್ಣಪ್ಪ ಸಾಸ್ತಾನ ವಂದಿಸಿದರು. ಧನ್ಯ ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯ, ಶೃತಿ, ನಿಕಿಲ್, ಚರಣ್, ರಜತ್ ಸಹಕರಿಸಿದರು.

