ಉಳ್ಳಾಲ: ಇತ್ತೀಚೆಗೆ ಕ್ಯಾಲಿಕಟ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಯಿಸಿ ಮೆಕ್ಸಿಕೋದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದ ಎಸ್ ಎಸ್ ಎಫ್ ಉಳ್ಳಾಲ ಪೇಟೆ ಶಾಖೆಯ ಕಾರ್ಯಕರ್ತ ಫಾಝಿಲ್ ಇವರಿಗೆ ಎಸ್ ಎಸ್ ಎಫ್ ಉಳ್ಳಾಲ ಕ್ಯಾಂಪಸ್ ವತಿಯಿಂದ ಬೀಳ್ಕೋಡುಗೆ ಸನ್ಮಾನ ಸಮಾರಂಭ ಹಳೆಕೋಟೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ರವರ ನೇತೃತ್ವದಲ್ಲಿ ನಡೆಯಿತು.

ನವಾಝ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಮುನೀರ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಇಲ್ಯಾಸ್ ಕೈಕೋ, ತ್ವಾಹಿರ್ ಹಾಜಿ, ಮನ್ಸೂರ್ ಹಳೆಕೋಟೆ, ಶಬೀರ್ ಪೇಟೆ, ತೌಸೀಫ್ ಒಂಭತ್ತುಕೆರೆ, ಅಹ್ಸನ್, ಹಫೀಝ್ ಕೋಡಿ, ನೌಫಲ್ ಕೋಟೆಪುರ ಹಾಗು ಮುಝಮ್ಮಿಲ್ ಉಸ್ತಾದ್ ಉಪಸ್ಥಿತರಿದ್ದರು. ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

