ಬಂಟ್ವಾಳ : ಬಿ.ಸಿ.ರೋಡ್ ನ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಬಿ.ಸಿ.ರೋಡ್ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್ ರವರ ನಿರ್ದೇಶನದಲ್ಲಿ ಭರತನಾಟ್ಯ ಹಾಗೂ ಸಾಧನಾ ಸಂಗೀತಾ ಪ್ರತಿಷ್ಠಾನ ಬಿ.ಸಿ.ರೋಡ್ ವಿದ್ಯಾರ್ಥಿಗಳಿಂದ ವಿದುಷಿ ಸುಚಿತ್ರಾ ಹೊಳ್ಳ ರವರ ನಿರ್ದೇಶನದಲ್ಲಿ ಸಂಗೀತ ಕಛೇರಿ ಕಾರ್ಯಕ್ರಮ ಜರಗಿತು.


