ಬಂಟ್ವಾಳ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನವರು ಕೃಷಿಯಲ್ಲಿ ಅವಲಂಬಿತರಾಗಿದ್ದು ಕೊಳವೆ ಬಾವಿ ಮುಖಾಂತರ ನೀರನ್ನು ಉಪಯೋಗಿಸಿ ಕೃಷಿ ಮತ್ತು ವ್ಯವಸಾಯ ಮಾಡುತ್ತಿದ್ದಾರೆ.

images

ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಅಡಿಕೆ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗಿದ್ದುಅಡಿಕೆ ಬೆಳೆಯಿಂದಲೇ ಜೀವನ ಸಾಗಿಸುತ್ತಿದ್ದು ಜಿಲ್ಲೆಯ ಬಹುತೇಕ ಆರ್ಥಿಕ ವಹಿವಾಟು ಅಡಿಕೆ ಬೆಳೆಯ ಮೇಲೆ ಅವಲಂಬಿತವಾಗಿದೆ. ಕೃಷಿಯನ್ನೇ ನಂಬಿರುವ ಜಿಲ್ಲೆಯ ಅನೇಕ ಕೃಷಿಕರಿಗೆ ಕೃಷಿ ಬೆಳೆ ಉಳಿಸಿಕೊಳ್ಳಲು ಬೋರ್‍ವೆಲ್(ಕೊಳವೆಬಾವಿ)ಗಳು ಅನಿವಾರ್ಯವಾಗಿವೆ.

ಹೀಗೆ ಬೋರ್‍ವೆಲ್‍ಗಳನ್ನು ನಂಬಿರುವ ಜನತೆಗೆ ಸರಕಾರ ಮುಂಗಾರು ಮಳೆ ಕೊರತೆ ಎಂಬ ನೆಪದಲ್ಲಿ ಬೋರ್‍ವೆಲ್‍ಗಳನ್ನು ಕೊರೆಯದಂತೆ ತಡೆಗಟ್ಟುವ ಆದೇಶದಿಂದ ತುಂಬಾ ಆಘಾತವಾಗಿದೆ. ಇದರಿಂದ ಬೋರ್‍ವೆಲ್ ನೀರಿನಿಂದ ಆಶ್ರಿತವಾದ ರೈತರ ಬದುಕು ಶೋಚನೀಯವಾಗಿದೆ. ಹೀಗೆ ಯಾವುದೇ ಕಾಲಮಿತಿ ವಿಧಿಸದೆ ಬೋರ್‍ವೆಲ್ ಕೊರೆಯುವುದನ್ನು ತಡೆಗಟ್ಟಿದರೆ ರೈತರ ಕೃಷಿ ಚಟುವಟಿಕೆ ನಿಂತು ಹೋಗಿ ಬರಗಾಲ ಎದುರಾಗಬಹುದಾಗಿದೆ.

ಜಿಲ್ಲೆಯಲ್ಲಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸುವುದರ ಮುಖಾಂತರ ಅಂತರ್ಜಲ ಹೆಚ್ಚಿಸಿ ಎಲ್ಲಾ ಕೆರೆ ಬಾವಿಗಳಲ್ಲಿ ನೀರಿನ ಮೂಲ ವೃದ್ಧಿಯಾಗಲು ಯೋಜನೆ ರೂಪಿಸಬೇಕು. ಆದುದರಿಂದ ಕರಾವಳಿ ಜಿಲ್ಲೆಗಳ ರೈತರ ಕೃಷಿ ಬದುಕನ್ನು ಉಳಿಸುವ ನಿಟ್ಟಿನಲ್ಲಿ ಬೋರ್‍ವೆಲ್ ಕೊರೆಯಲು ತಡೆಗಟ್ಟುವ ಆದೇಶವನ್ನು ತಕ್ಷಣದಿಂದ ರದ್ದುಪಡಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *