ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾಗಿರುವ “ಬರ್ಸ” ತುಳು ಚಲನಚಿತ್ರ ಅ.13ರಂದು ಕರಾವಳಿಯ 9 ಥಿಯೇಟರ್‍ಗಳಲ್ಲಿ ತೆರೆ ಕಾಣಲಿದೆ.
ಮಂಗಳೂರಿನ ಸುಚಿತ್ರ, ಬಿಗ್ ಸಿನೆಮಾಸ್, ಸಿನೆಪೊಲಿಸ್, ಪಿವಿಆರ್, ಕಾರ್ಕಳದಲ್ಲಿ ರಾಧಿಕಾ, ಮೂಡುಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್‍ನಲ್ಲಿ ನಟರಾಜ್, ಮಣಿಪಾಲದಲ್ಲಿ ಐನಕ್ಸ್ ಚಿತ್ರಮಂದಿರದಲ್ಲಿ “ಬರ್ಸ” ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಒಂದು ವಾರದ ಬಳಿಕ ಉಡುಪಿ, ಯುಎಸ್‍ಎ ಸೇರಿದಂತೆ ದೇಶ ವಿದೇಶಗಳ 40 ಸಿನೆಮಾ ಮಂದಿರದಲ್ಲಿ ತೆರೆ ಕಾಣಲಿದೆ ಎಂದು ದೇವದಾಸ್ ಕಾಪಿಕಾಡ್ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿರುವ ಬರ್ಸ ಚಿತ್ರದಲ್ಲಿ ಲವ್ ಸೆಂಟಿಮೆಂಟ್, ಫೈಟ್, ಕಾಮಿಡಿ, ಎಲ್ಲವನ್ನೂ ಮಿಕ್ಸ್ ಮಾಡಲಾಗಿದೆ. ಕ್ಷಮಾ ಶೆಟ್ಟಿ ಚಿತ್ರದ ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಲಕ್ಷ್ಮಣ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್, ಸುಂದರ್ ರೈ ಮಂದಾರ, ಸತೀಶ್ ಬಂದಲೆ ಸೇರಿದಂತೆ ಹಲವು ತುಳು ಚಿತ್ರರಂಗದ ಶ್ರೇಷ್ಠ ಕಲಾವಿದರು ಚಿತ್ರದಲ್ಲಿದ್ದಾರೆಂದರು.
ಕದ್ರಿ ಮಣಿಕಾಂತ್ ಹಿನ್ನಲೆ ಸಂಗೀತದಲ್ಲಿರುವ ಚಿತ್ರದ ಎಲ್ಲಾ ಹಾಡುಗಳು ಈಗಾಗಲೇ ಉತ್ತಮ, ಪ್ರತಿಕ್ರಿಯೆ ಪಡೆದಿದ್ದು ಪಿ.ಎಲ್.ರವಿ ಛಾಯಾಚಿತ್ರಗ್ರಹಣ, ಮಾಸ್ ಮಾದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಸುಜಿತ್ ನಾಯಕ್ ಸಂಕಲನ ಮಾಡಿದ್ದು, ಸಚಿನ್ ಉಪ್ಪಿನಂಗಡಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ರಾಜೇಶ್ ಕುಡ್ಲ ನಿರ್ಮಾಣ ನಿರ್ವಹಣೆಯಲ್ಲಿ ಸಹಕರಿಸಿದ್ದಾರೆ ಎಂದರು.

