ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ವೈಭವದ “ಮಂಗಳೂರು ದಸರಾ” ಮಹೋತ್ಸವ ಶೋಭಾಯಾತ್ರೆ ಅ.12 ರಂದು ಬೆಳಗ್ಗೆ ಸಂಪನ್ನಗೊಂಡಿತು.

                                                                                                                ಚಿತ್ರ:ಅಮ್ಟೂರು

img-20161013-wa0007

ಮಂಗಳವಾರ ಸಂಜೆ ಶ್ರೀ ಕ್ಷೇತ್ರದಿಂದ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾಮಾತೆ, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ವಿಗ್ರಹಗಳ ಸಹಿತ ವರ್ಣರಂಜಿತ ಬೃಹತ್ ಮಂಗಳೂರು ದಸರಾ ಮೆರವಣಿಗೆ ಅಳಕೆ ಮಣ್ನಗುಡ್ಡೆ, ಲೇಡಿಹಿಲ್, ಲಾಲ್ ಬಾಗ್, ಎಂ.ಜಿ.ರಸ್ತೆ. ಕೆ.ಎಸ್.ರಾವ್ ರೋಡ್, ವಿ.ವಿ.ಕಾಲೇಜು ಮೂಲಕ ಗಣಪತಿ ಹೈಸ್ಕೂಲ್ ರಸ್ತೆ, ರಥಬೀದಿ ಅಳಕೆ ಮೂಲಕ ಶ್ರೀ ಕ್ಷೇತ್ರಕ್ಕೆ ಬುಧವಾರ ಬೆಳಗ್ಗೆ ಆಗಮಿಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಜಲಸ್ತಂಭನಗೊಳಿಸಲಾಯಿತು.

                                                                                                             ಚಿತ್ರ:ಅಮ್ಟೂರು

img-20161013-wa0006

ಮೆರವಣಿಗೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸ್ತಬ್ಧ ಚಿತ್ರ, ಹುಲಿವೇಷ, ನೃತ್ಯರೂಪಕಗಳು, ಬಣ್ಣದ ಕೊಡೆ, ಕೇರಳದ ಚೆಂಡೆವಾದ್ಯ, ಗೊಂಬೆ ಕುಣಿತ, ವಾದ್ಯ ತಂಡ, ನಾಸಿಕ್ ಬ್ಯಾಂಡ್, ಜಾನಪದ ವೈವಿಧ್ಯ ಸೇರಿದಂತೆ ಹಲವು ತಂಡಗಳು ಶೋಭಾಯಾತ್ರೆಗೆ ಮೆರುಗು ನೀಡಿದ್ದವು. ಸಾವಿರಾರು ಮಂದಿ ಮಂಗಳೂರು ದಸರಾ ಶೋಭಾಯಾತ್ರೆ ವೀಕ್ಷಿಸಿದರು.

img-20161013-wa0005

ದೇವಸ್ಥಾನದ ನವೀಕರಣದ ರೂವಾರಿ ಜನಾರ್ದನ ಪೂಜಾರಿ, ಸಚಿವ ಯು.ಟಿ.ಖಾದರ್, ಶಾಸಕ ಜೆ,ಆರ್., ಲೋಬೋ ಸೇರಿದಂತೆ ಕ್ಷೇತ್ರದ ಆಡಳಿತ ಮತ್ತು ಅಭಿವೃದ್ಧಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *