ಬಂಟ್ವಾಳ: ಸಜಿಪ ಮೂಡ ಗ್ರಾಮದ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ 90ನೇ ವರ್ಷದ ಶಾರದಾ ಪೂಜೊತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ್ ಬ್ರಾಸಿತ್ತಾಯ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಅವರು ಬಿ.ಸದಾನಂದ ಪೂಂಜ ನೇತೃತ್ವದಲ್ಲಿ ಸಜಿಪಮೂಡ ಗ್ರಾಮದಲ್ಲಿ ಸುಭಾಷ್ ಯುವಕ ಮಂಡಲ ವತಿಯಿಂದ ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಸೌಹಾರ್ದಯುತವಾಗಿ ವಿಶಿಷ್ಟ ರೀತಿಯಲ್ಲಿ ಶಾರದಾ ಮಾತೆಯ ಆರಾದನೆಗೊಳ್ಳುತಿರುವುದು ಅಭಿನಂದನಾರ್ಹ ಎಂದು ನುಡಿದರು. ಇದೇ ಸಂದರ್ಭದಲ್ಲಿ ಸುಭಾಷ್ ಯುವಕ ಮಂಡಲ ವತಿಯಿಂದ ಬೆಳ್ಳಿ ನವಿಲು , ಸುಭಾಷ್ ನಗರ ಕುಸುಮಾ ಬಾಬು ಪೂಜಾರಿ ಯವರ ವತಿಯಿಂದ ಚಿನ್ನದ ಬಳೆ ಮತ್ತು ಲತಾ ಯೋಗೀಶ್ ಬೆಳ್ಚಾಡ ಕೂಡೂರು ಇವರ ವತಿಯಿಂದ ಬೆಳ್ಳಿ ಗೆಜ್ಜೆಯನ್ನು ಶಾರದಾ ಮಾತೆಗೆ ಸಮರ್ಪಿಸಲಾಯಿತು.
ವೇದಿಕೆಯಲ್ಲಿ ಜಯಕರ್ನಾಟಕ ಜಿಲ್ಲಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಶಾರದಾ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಸುವರ್ಣ, ಗ್ರಾ.ಪಂ.ಸದಸ್ಯ ಯೋಗೀಶ್ ಬೆಳ್ಚಾಡ, ಶಾಲಾಭಿವೃದ್ದಿಸಮಿತಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ, ಮುಖ್ಯೋಪಾಧ್ಯಾನಿ ವತ್ಸಲಾ, ಸ.ಮೂ.ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಎಂ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ನಂತರ ಶಾಲಾವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರಗಿತು.

