ಬಜಪೆ: ಶ್ರೀ ಶಾರದೋತ್ಸವ ಸಮಿತಿ ಬಜಪೆ ಇದರ ಆಶ್ರಯದಲ್ಲಿ 24ನೇ ವರ್ಷದ ಶ್ರೀ ಶಾರದೋತ್ಸವ ಅ.8 ಶನಿವಾರದಿಂದ ಅ.10 ಸೋಮವಾರದವರೆಗೆ ಬಜಪೆ ಕೇಂದ್ರ ಮೈದಾನದ ಶ್ರೀ ಶಕ್ತಿ ಮಂಟಪದಲ್ಲಿ ಬೆಳಿಗ್ಗೆ ಶ್ರೀ ವಿಜಯ ವಿಠಲ ಭಜನಾ ಮಂದಿರದಿಂದ ಶ್ರೀ ಶಾರದಾಮಾತೆಯ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಗಣಹೋಮ ಇನ್ನಿತರ ಧಾರ್ಮಿಕ ವಿಗಳ ಬಳಿಕ 10.35ಕ್ಕೆ ಶಕ್ತಿ ಮಂಟಪದಲ್ಲಿ ಶ್ರೀ ಶಾರದಾಮಾತೆಯ ಮೂರ್ತಿ ಪ್ರತಿಷ್ಠೆ ನಡೆಯಲಿದೆ. ಬಳಿಕ ಭಜನೆ ಹಾಗೂ ಸಾಂಸ್ರ್ಕತಿಕ ಕಾರ್ಯಕ್ರಮಗಳು ಜರುಗಲಿದೆ.
