ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದು ರಾಯಣ್ಣ ಬಿ’ಗ್ರೇಡ್ ಸ್ಥಾಪಿಸಿರುವ ವಿಧಾನ ಪರಿಷತ್ ಪ್ರತಿಪಕ್ಷನಾಯಕ ಕೆ.ಎಸ್ ಈಶ್ವರಪ್ಪ ನಡುವಳಿಕೆಯಿಂದ ಪಕ್ಷದಲ್ಲಿ ಭಿನ್ನಭಿಪ್ರಾಯ ತೀವ್ರಗೊಂಡಿದ್ದು ಪರಿಸ್ಥಿತಿ ಶಮನಗೊಳಿಸಲು ಪಕ್ಷದ ವರಿಷ್ಠ ರಾಮ್ ಲಾಲ್ ಮಧ್ಯ ಪ್ರವೇಶ ಮಾಡಿದ್ದಾರೆ.

img-20161006-wa0076

ರಾಮ್ ಲಾಲ್ ಸಮ್ಮುಖದಲ್ಲಿ ನಾಳೆ ರಾಜ್ಯ ಬಿಜೆಪಿ ಕೋರ್ ಸಮಿತಿ ಸಭೆ ನಡೆಯಲಿದ್ದು ಉಭಯ ನಾಯಕರ ನಡುವಿನ ತಾಕಲಾಟ ಶಮನಗೊಳಿಸಲು ಪ್ರಯತ್ನ ನಡೆಸಲಿದ್ದಾರೆ. ಅ.3 ಹಾಗೂ 4ರಂದು ನಡೆದ ರಾಜ್ಯ ಬಿಜೆಪಿಯ 2ದಿನಗಳ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಮಾತನಾಡಿದ ಅವರು ಏಕವ್ಯಕ್ತಿತ್ವ ಪಕ್ಷ ಅಲ್ಲ. ಇಲ್ಲಿ ಸರ್ವಾಧೀಕಾರಿ ನಡವಳಿಕೆ ಸಲ್ಲ ಎಂದು ಹೇಳಿದ್ದರು. ಇವತ್ತು ಯಡಿಯೂರಪ್ಪ ಅಧ್ಯಕ್ಷರಾಗಿರಬಹುದು, ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರಬಹುದು. ಆದರೆ ಪುನಃ ಈ ಕುರಿತು ಎಲ್ಲವನ್ನೂ ನಿರ್ಧರಿಸುವುದು ಹೈಕಮಾಂಡ್ ಎನ್ನುವ ಮೂಲಕ ಎಚ್ಚರಿಕೆಯ ನುಡಿಗಳನ್ನಾಡಿದರು.

img-20161006-wa0078

ಹೀಗಾಗಿ ಪಕ್ಷದ ನಾಯಕರಲ್ಲಿ ಏನೆ ಮೈಮನಸ್ಸುಗಳಿದ್ದರೂ ಅದನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು. ಒಗ್ಗೂಡಿ ಪಕ್ಷ ಅಧಿಕಾರಕ್ಕೆ ಬರಲು ಪೂರಕವಾಗಿ ದುಡಿಯಬೇಕು ಎಂದು ರಾಮ್ ಲಾಲ್ ಅವರು ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಣ ಭಿನ್ನಭಿಪ್ರಾಯಕ್ಕೆ ಪರೋಕ್ಷವಾಗಿ ಮದ್ದು ನೀಡಿದ್ದರು.

By suddi9

Leave a Reply

Your email address will not be published. Required fields are marked *