ಬೆಂಗಳೂರು: ತನ್ನ ಅದ್ದೂರಿ ಟ್ರೈಲರ್, ವಿಭಿನ್ನ ರೀತಿಯ ಆಡಿಯೋ ಸಮಾರಂಭ, ಭರ್ಜರಿ ಪ್ರಮೋಷನ್ ಹೀಗೆ ಹಲವಾರು ವಿಷಯಗಳ ಮೂಲಕ ಸ್ಯಾಂಡಲ್ ವುಡ್ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ನಾಗರಹಾವು ಚಿತ್ರ ಇಂದು  ಬಿಡುಗಡೆಯಾಗುತ್ತಿದೆ.

nagarahavu-2016-kannada-film-dr-vishnuvardhan-digitally-created-pic

70ರ ದಶಕದಲ್ಲಿ ತೆರೆಕಂಡ ನಟ ವಿಷ್ಣುವರ್ಧನ್ ಅವರ ಅಭಿನಯದ ಮೊದಲ ಚಿತ್ರವೂ ಕೂಡ ನಾಗರಹಾವು ಆಗಿತ್ತು. ಅಲ್ಲದೆ ಇದೀಗ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಷ್ಣು ವರ್ಧನ್ ಅವರ ಅಭಿನಯದ 201ನೇ ಸಿನಿಮಾ ಕೂಡ ನಾಗರಹಾವು ಆಗಿರುವುದು ವಿಶೇಷ. ಇಂದು ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ, ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ಈ ಚಿತ್ರವು ಗ್ರ್ಯಾಂಡ್ ಆಗಿ ತೆರೆಕಾಣುತ್ತಲಿದೆ. ಕನ್ನಡದಲ್ಲಿ ನಾಗರಹಾವು, ತೆಲುಗಿನಲ್ಲಿ ನಾಗಭರಣಂ ಮತ್ತು ತಮಿಳಿನಲ್ಲಿ ಶಿವನಾಗಂ ಎಂಬ ಹೆಸರಿನಲ್ಲಿ  ಈ ಸಿನಿಮಾ ಅದ್ದೂರಿಯಾಗಿ  ನಿರ್ಮಾಣವಾಗಿದ್ದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಾದ್ಯಂತ ಸುಮಾರು 1100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ  ಭರ್ಜರಿಯಾಗಿ ತೆರೆ ಕಾಣುತ್ತಲಿದೆ. ಈ ಚಿತ್ರದ ಆ್ಯಡಿಯೋ ಕೂಡ ಆಗಸ್ಟ್ 14ರಂದು ಬಿಡುಗಡೆಯಾಗಿತ್ತು. ಕಾಕತಾಳೀಯವೆಂಬಂತೆ ಚಿತ್ರವೂ ಕೂಡ ಅದೇ ದಿನಾಂಕದಂದು ರಿಲೀಸಾಗುತ್ತಿದೆ.

ವಿಷ್ಣು ಅಭಿಮಾನಿಗಳ ತೀವ್ರ ಆಗ್ರಹಕ್ಕೆ ಮಣಿದ ಚಿತ್ರತಂಡ ಇಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ 4 ದಿನಗಳ ಮುಂಚೆಯೇ ಮುಂಗಡ ಟಿಕೆಟ್ ಗಳನ್ನು ಕೊಡುವಂಥ ವ್ಯವಸ್ಥೆ ಯನ್ನು ಮಾಡಿತ್ತು. ಆ ಸೌಲಭ್ಯವನ್ನು ಉಪಯೋಗಿಸಿಕೊಂಡಿರುವ ಅಭಿಮಾನಿಗಳು ರಾತ್ರಿಯಿಡೀ ಕಾದುನಿಂತು ಟಿಕೆಟ್ ಖರೀದಿಸಿದ್ದಾರಲ್ಲದೆ ಚಿತ್ರವನ್ನು ನೋಡಲು ತುದಿಗಾಲಿನಲ್ಲಿ ಕಾದುಕುಳಿತಿದ್ದಾರೆ.

ತೆಲುಗಿನ ಅರುಂಧತಿಯಂಥ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿರುವ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ದಕ್ಷ ನಿರ್ದೇಶನ ಹಾಗೂ ಸದಭಿರುಚಿಯ ನಿರ್ಮಾಪಕರಾದ ಸಾಜಿದ್ ಖುರೇಶಿ ಅವರ ಬ್ಲಾಕ್ ಬಸ್ಟರ್ ಸ್ಟುಡಿಯೋ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಹೆಡ್ ರೀಪ್ಲೇಸ್ಮೆಂಟ್ ಎಂಬ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಬೆಳ್ಳಿತೆರೆಯ ಮೇಲೆ ಜೀವಂತಗೊಳಿಸಲಾಗಿದೆ.

ತೆಲುಗಿನ ಅರುಂಧತಿ ಚಿತ್ರದ ಖ್ಯಾತಿಯ ಕೋಡಿ ರಾಮಕೃಷ್ಣ ನಿರ್ದೇಶಿಸಿರುವ ನಾಗರಹಾವು ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ಸ್ಯಾಂಡಲ್ವುಡ್ನ ಮೋಹಕನಟಿ ರಮ್ಯಾ, ದಿಗಂತ್ ಪ್ರಧಾನ ಪಾತ್ರಗಳಲ್ಲಿ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ವಿಶೇಷ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ನಾಗರಹಾವು.

ಈ ಚಿತ್ರದಲ್ಲಿ 10 ನಿಮಿಷಗಳ ಕಾಲ ತೆರೆಯ ಮೇಲೆ ಮೂಡಿ ಬರಲಿರುವ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪಾತ್ರಕ್ಕೆ 15 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಅಲ್ಲದೆ ಇಡೀ ಚಿತ್ರದಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಮೂಡಿಬರಲಿರುವ ಗ್ರಾಫಿಕ್ಸ್ ಗಾಗಿ 10 ಕೋಟಿ ರೂ.ಗಳನ್ನು ಖರ್ಚುಮಾಡಲಾಗಿದ್ದು, ಒಟ್ಟು 25ಕೋಟಿ ರೂ.ಗಳನ್ನು ಗ್ರಾಫಿಕ್ಸ್ ಗಾಗಿಯೇ ಖರ್ಚು ಮಾಡಲಾಗಿದೆ. ಅಲ್ಲದೆ ನೂರಾರು ತಂತ್ರಜ್ಞರು 32 ತಿಂಗಳು ಗಳ ಕಾಲ ಇದಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ನಿರ್ಮಾಪಕ ಸಾಜೀದ್ ಖುರೇಶಿ ಬಂಡವಾಳ ಹೂಡಿದ್ದಾರೆ. ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ನಾಗರಾಜನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಸುಮಾರು 140 ಅಡಿ ಉದ್ದದ ದೈತ್ಯ ಹಾವಿನ ರೂಪದಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.

ನಾಗರಹಾವು ಚಿತ್ರದಲ್ಲಿ ಗ್ರಾಫಿಕ್ಸ್ ಸೇರಿದಂತೆ ನಾನಾ ವಿಧದ ಟೆಕ್ನಾಲಜಿ ಬಳಸಿ ಚಿತ್ರವನ್ನು ಅದ್ದೂರಿಯಾಗಿ ತೆರೆಮೇಲೆ ತರಲಾಗಿದೆ. ಈ ಚಿತ್ರದಲ್ಲಿ ನಾಗಿಣಿ ಅವತಾರದಲ್ಲಿ ಮಿಂಚಿರುವ ನಟಿ ರಮ್ಯಾ, 120 ಅಡಿ ಉದ್ದದ ಹಾವಿನ ರೂಪದಲ್ಲಿ ಕಾಣಿಸಿಕೊಳ್ಳಲಿ ದ್ದಾರೆ ಎನ್ನಲಾಗುತ್ತಿದೆ. ಬಹು ನಿರೀಕ್ಷೆಯ ಈ ಚಿತ್ರ ಪ್ರೇಕ್ಷಕರನ್ನು ಯಾವ ರೀತಿ ರಂಜಿಸಲಿದೆ ಕಾದು ನೋಡಬೇಕಿದೆ. ಇನ್ನು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಚಿತ್ರ ತಯಾರಾಗಿದ್ದು, ಹಿಂದಿಗೆ ಡಬ್ ಕೂಡ ಆಗಿದ್ದು, ರಿಲೀಸ್ ಗೆ ಮೊದ್ಲೇ 100ಕೋಟಿ ರೂ. ಗಳಿಸಿದ ಹೆಗ್ಗಳಿಗೆ ಪಾತ್ರವಾಗಿದೆ.

By suddi9

Leave a Reply

Your email address will not be published. Required fields are marked *