ಬೆಂಗಳೂರು: ಬಹುಭಾಷಾ ನಟಿ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ನಿಖಿತಾ ತುಕ್ರಾಲ್ ಮುಂಬೈ ಮೂಲದ ಗಗನ್ ದೀಪ್ ಎಂಬುವರ ಜೊತೆ ಸಪ್ತಪದಿ ತುಳಿಯಲು ತಯಾರಾಗಿರುವ ನಿಖಿತಾ ಸದ್ದಿಲ್ಲದೇ ಮದುವೆ ತಯಾರಿ ಮುಗಿಸಿದ್ದಾರೆ.
“ಮಹರಾಜ” ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಿಖಿತಾ 40ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೀಗ ಮುಕುಂದ ಮುರಾರಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

