ಮೂಡುಬಿದಿರೆ: ಎಲ್ಲೆಡೆಯ ಶಿಷ್ಯವರ್ಗದವರಿಗೂ ನಮ್ಮ ಗುರುಗಳೆಂಬ ಆತ್ಮೀಯತೆ, ಉನ್ನತ ವ್ಯಕ್ತಿತ್ವ, ವಿಚಾರ ಶ್ರೇಷ್ಠತೆ, ಸಾಗರೋಪಾದಿಯ ಪ್ರೀತಿ, ಕವಿತ್ವ ಸಾಮಥ್ರ್ಯ, ಸಂಸ್ಕøತ ಪಾಂಡಿತ್ಯದಿಂದ ತಮ್ಮ ಜೀವನವನ್ನೇ ಆದರ್ಶವನ್ನಾಗಿಸಿದವರು ಸದ್ಗುರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು. ಸಮಾಜದಿಂದ ಪಡೆಯುವುದಷ್ಟೇ ಅಲ್ಲ ಕೊಡುವುದಕ್ಕೂ ಶಕ್ತರಾಗುವಂತೆ ವಿದ್ಯೆಗೆ ಮಹತ್ವ ನೀಡಿದ್ದು ಗುರುವರ್ಯರ ಶ್ರೇಷ್ಠತೆ ಎಂದು ಕಾರ್ಕಳದ ಹಿರಿಯ ವೈದಿಕ ಕೆ. ರವೀಂದ್ರ ಭಟ್ ಹೇಳಿದರು.

mbd_oct3_8-1

mbd_oct3_8-4

ಅವರು ಸೋಮವಾರ ಹರಿದ್ವಾರದಲ್ಲಿರುವ ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ಹನುಮ ವಿಗ್ರಹದ ರಥಯಾತ್ರೆಯು ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಗುರುಗುಣಗಾನದಲ್ಲಿ ಮಾತನಾಡಿದರು. ಸಂಸ್ಕೃತವನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿ, ಸಂಸ್ಕಾರಗಳ ಉಳಿವಿಗೆ ಮಹತ್ವಪೂರ್ಣ ಕೊಡುಗೆ ನೀಡಿದ ಗುರುವರ್ಯರ ಆಧ್ಯಾತ್ಮಿಕ ಪಾಂಡಿತ್ಯ, ಅಧ್ಯಯನಾಸಕ್ತಿ, ಸ್ವಾಭಿಮಾನದ ಜೀವನಕ್ಕೆ ಅವರ ಜೀವನ ಸಂದೇಶ ಅನುಕರಣೀಯ ಎಂದರು.

mbd_oct3_8-3

mbd_oct3_8-2

ನಿಡ್ಡೋಡಿಯಿಂದ ಮೂಡುಬಿದಿರೆಗೆ ಆಗಮಿಸಿದ ರಥವನ್ನು ಇಲ್ಲಿನ ಶ್ರೀ ಹನುಮಂತ ದೇವಸ್ಥಾನದ ಬಳಿ ಸ್ವಾಗತಿಸಿ ವೆಂಕಟರಮಣ ದೇವಳಕ್ಕೆ ಬರಮಾಡಿಕೊಳ್ಳಲಾಯಿತು. ದೇವಳದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ ಪೇಟೆಯ ವತಿಯಿಂದ ಸ್ವಾಗತಿಸಿ ಗುರುವರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಹಾರಾರ್ಪಣೆಯೊಂದಿಗೆ ರಥಕ್ಕೆ ಗೌರವಾರ್ಪಣೆ ಸಲ್ಲಿಸಿದರು. ದೇವಳದಲ್ಲಿ ವಿಶೇಷ ಮಹಾಪೂಜೆ, ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗುರುಕಾಣಿಕೆ ಸಮರ್ಪಣೆ, ಸಂಕೀರ್ತನಾ ಸೇವೆ ಸಲ್ಲಿಸಲಾಯಿತು. ಬಳಿಕ ಹನುಮ ರಥವನ್ನು ಕೆಸರಗದ್ದೆ ಮಂದಿರಕ್ಕೆ ಬೀಳ್ಕೊಡಲಾಯಿತು. ದೇವಳದ ಆಡಳಿತ ಮಂಡಳಿಯ ಮೊಕ್ತೇಸರರುಗಳು ಉಪಸ್ಥಿತರಿದ್ದರು. ಮೊಕ್ತೇಸರ ಪಿ.ರಾಮನಾಥ ಭಟ್ ವಂದಿಸಿದರು.

By suddi9

Leave a Reply

Your email address will not be published. Required fields are marked *