ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಮುರಗೋಳಿ ಹಾಡಿಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ನಾಲ್ಕು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.crime

ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತ್ರತ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಸ್.ಐ ದೇಜಪ್ಪ, ಅಪರಾಧ ವಿಭಾಗದ ಎಸ್.ಐ ಕುಶಾಲಪ್ಪ ಗೌಡ ಇವರನ್ನೊಳಗೊಂಡ ಪೊಲೀಸ್ ತಂಡ ಮುರಗೋಳಿ ಪಾದೆ ಬಳಿಯ ಹಾಡಿಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡಗೆ ಭಾನುವಾರ ಸಂಜೆ ದಾಳಿ ನಡೆಸಿದ್ದರು. ದಾಳಿಯ ಮುನ್ಸೂಚನೆ ಅರಿತ ಆರೋಪಿಗಳು ಇನ್ನೊಂದು ದಾರಿಯಲ್ಲಿ ಪರಾರಿಯಾದರೆನ್ನಲಾಗಿದೆ. ಸ್ಥಳದಲ್ಲಿ ಬಿಟ್ಟು ಹೋದ ನಾಲ್ಕು ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಜುಗಾರಿಕೋರರ ಪೈಕಿ ಸುನೀಲ್, ಪಿಂಕು ಯಾನೆ ಪ್ರವೀಣ, ರಾಜಶೇಖರ, ಸಂದೀಪ್, ಅಶೋಕ್‍ನನ್ನು ಪೊಲೀಸರು ಗುರುತಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *