ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ ಐದು ದಿನಗಳ ಕಾಲ ನಡೆಯುವ 71ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಶನಿವಾರ ಸಂಜೆ ಉಜಿರೆ ಎಸ್,ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಯಶೋವರ್ಮ ಉದ್ಘಾಟಿಸಿದರು.

mbd_oct2_2

ನಂತರ ಮಾತನಾಡಿದ ಅವರು ಮನುಷ್ಯನ ಮೆದುಳು ಇತರ ಎಲ್ಲಾ ಜೀವಿಗಳಿಗಿಂತಲೂ ದೊಡ್ಡದು. ಸಾಹಿತ್ಯವು ನಮ್ಮ ಬದುಕಿನಲ್ಲಿ ಬೇಕು. ನಾವು ನಮ್ಮ ಮೆದುಳನ್ನು ಉತ್ತಮ ಕೆಲಸಗಳಿಗೆ ಉಪಯೋಗಿಸಿ ಧರ್ಮ ಹಾಗೂ ಸಾಹಿತ್ಯದ ಮೂಲಕ ಗುರಿಯನ್ನು ತಲುಪಬಹುದು ಎಂದು ಹೇಳಿದರು.  ಸಮಾಜ ಮಂದಿರ ಸಭಾದ ಅಧ್ಯಕ್ಷ, ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್, ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ ಹಾಗೂ ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಬೋವಿ ಅವರನ್ನು ಸಮಾಜ ಮಂದಿರ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಪಿ.ಎಸ್.ಭಟ್, ಕೋಶಾಧಿಕಾರಿ ಎಸ್.ವಾಸುದೇವ ರಾವ್, ಮಾಜಿ ಅಧ್ಯಕ್ಷ ಎಲ್.ಸಿ ಸೋನ್ಸ್ ಸದಸ್ಯರುಗಳಾದ ಕೆ.ದಯಾನಂದ ಪಂಡಿತ್, ಸಿ.ಎಚ್. ಅಬ್ದುಲ್ ಗಫೂರ್, ಹೆಚ್. ಸುರೇಶ್ ಪ್ರಭು ಉಪಸ್ಥಿತರಿದ್ದರು.

ಸಮಾಜ ಮಂದಿರದ ಸಭಾದ ಉಪಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಸ್ವಾಗತಿಸಿದರು. ದಸರಾ ಉತ್ಸವ ಸಂಚಾಲಕರಾದ ಡಾ. ಪಂಡಿಕಾೈ ಗಣಪಯ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ, ದಸರಾ ಉತ್ಸವ ಸಂಚಾಲಕ ಎಂ.ಗಣೇಶ್ ಕಾಮತ್ ಸಮ್ಮಾನಿತರ ಕುರಿತು ಅಭಿನಂದನಾ ಮಾತುಗಳನ್ನಾಡಿದರು. ಇನ್ನೋರ್ವ ಜತೆ ಕಾರ್ಯದರ್ಶಿ ಕೆ. ಆರ್. ಪಂಡಿತ್ ವಂದಿಸಿದರು. ಬಳಿಕ ಶ್ರೀ ಅನಂತ ಶಯನ ಮಹಿಳಾ ಯಕ್ಷಗಾನ ಮಂಡಳಿ ಕಾರ್ಕಳ ಬಳಗದಿಂದ ತುಳುನಾಡ ಬಲಿಯೇಂದ್ರ ತುಳು ಯಕ್ಷಗಾನ ತಾಳಮದ್ದಳೆ ನಡೆಯಿತು.

By suddi9

Leave a Reply

Your email address will not be published. Required fields are marked *