ಮೂಡುಬಿದಿರೆ: ಸ್ವಾವಲಂಬಿ ಸ್ವಾಭಿಮಾನ ಭಾರತಕ್ಕಾಗಿ ಗಾಂಧೀಜಿಯವರ ಚಿಂತನೆ ಎಂಬ ವಿಷಯದ ಕುರಿತು ಮಹಾವೀರ ಕಾಲೇಜಿನಲ್ಲಿ ನಡೆದ `ಎಸ್. ಡಿ. ಸಾಮ್ರಾಜ್ಯ’ ಸಂಸ್ಮರಣಾರ್ಥ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ಉಜಿರೆ ಎಸ್‍ಡಿಎಂ ಕಾಲೇಜಿನ ಆತ್ಮೀಯ ಶೆಟ್ಟಿ ಪ್ರಥಮ ಹಾಗೂ ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ಮೃತ್ಯುಂಜಯ ಶಾಸ್ತ್ರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸುಷ್ಮಿತಾ ಕೆ.ವೈ ತೃತೀಯ ಸ್ಥಾನಿಯಾಗಿದ್ದಾರೆ. ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಭೂಮಿಕಾ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಜೊಸ್ವಿಟಾ ಲೊರೈನ್ ಲೋಬೊ, ಮೂಲ್ಕಿ ವಿಜಯ ಕಾಲೇಜಿನ ಲಿನೆಟ್ ಕ್ವಾಡ್ರಸ್ ಸಮಾಧಾನಕರ ಬಹುಮಾನ ಗಳಿಸಿದರು. 24 ಕಾಲೇಜುಗಳ 42 ಮಂದಿ ಸ್ಪರ್ಧಾಳುಗಳು ಭಾಗವಹಿಸಿದರು. ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಕೊಡಂಗಲ್ಲು ಶಾಖಾ ಪ್ರಬಂಧಕ ಸತ್ಯಜಿತ್ ಬಹುಮಾನ ವಿತರಿಸಿದರು.
ತೀರ್ಪುಗಾರರಾಗಿ ಸಹಕರಿಸಿದ ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ಸಹ ಪ್ರಾಧ್ಯಾಪಕ ಹರೀಶ್ ಆಚಾರ್ಯ, ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಹರಿಪ್ರಸಾದ್ ರೈ, ಆಳ್ವಾಸ್ ಕಾಲೇಜಿನ ಸಹ ಪ್ರಾಧ್ಯಾಪಕಿ ಸಂಧ್ಯಾ, ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್, ಮಾನವಿಕ ಸಂಘದ ಸಂಯೋಜಕ ರಾಧಾಕೃಷ್ಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲಿಸ್ಟರ್ ಲೋಬೋ ಮತ್ತು ಮಾನವಿಕ ಸಂಘದ ಕಾರ್ಯದರ್ಶಿ ಸುರಕ್ಷಾ ಉಪಸ್ಥಿತರಿದ್ದರು. ದಿವ್ಯಾ ಸ್ವಾಗತಿಸಿದರು. ಸುಶ್ಮಿತಾ ನಿರೂಪಿಸಿದರು. ಫಾತಿಮಾ ತುಲ್ ಸವನ ವಂದಿಸಿದರು. ಶ್ರೀ ಮಹಾವೀರ ಕಾಲೇಜಿನ ಮಾನವಿಕ ಸಂಘ ಹಾಗೂ ಅರ್ಥಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.

