ಸುಳ್ಯ: ತಂದೆಯನ್ನು ಹೊಡೆದು ಸಾಯಿಸಿದ ಆರೋಪ ಎದುರಿಸುತ್ತಿದ್ದು, ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಕೊಡಿಯಾಲ ಗ್ರಾಮದ ದಯಾನಂದ ಎಂಬವರನ್ನು ಪುತ್ತೂರಿನ ದ.ಕ. ಜಿಲ್ಲಾ 5ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿದೆ.

2013ರ ಮೇ 21ರಂದು ಕೊಡಿಯಾಲ ಗ್ರಾಮದ ವಿಶ್ವನಾಥ ಗೌಡರವರನ್ನು ಅವರ ಮಗ ದಯಾನಂದ ಎಂಬವನು ಅಡಿಕೆ ಸುಲಿಯುವ ಮಣೆಯಿಂದ ಹೊಡೆದ ಪರಿಣಾಮ ವಿಪರೀತ ರಕ್ತಸ್ರಾವವಾಗಿ ವಿಶ್ವನಾಥ ಗೌಡರು ಮೃತಪಟ್ಟರು ಎಂದು ಆರೋಪಿಸಿ ಮಗ ದಯಾನಂದನ ವಿರುದ್ಧ ಮೃತರ ತಂಗಿ ಕಮಲರವರು ನೀಡಿದ ದೂರಿನನ್ವಯ ದಯಾನಂದನ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 302ರ ಮೇರೆಗೆ ಕೊಲೆ ಆರೋಪದಡಿಯ ಮೊಕದ್ದಮೆಯನ್ನು ದಾಖಲಿಸಿಕೊಂಡು ಆರೋಪಿನ್ನು ಬಂಧಿಸಲಾಗಿತ್ತು.

ಪ್ರಕರಣವು ದ.ಕ. ಜಿಲ್ಲಾ 5ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದಲ್ಲಿ ತನಿಖೆ ನಡೆದು ಬಳಿಕ ಆರೋಪಿಯ ವಿರುದ್ಧದ ಅಪಾದನೆಯನ್ನು ಸಾಬೀತು ಪಡಿಸುವಲ್ಲಿ ಅಭಿಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ನ್ಯಾಯಧೀಶೆಯಾದ ಯಾದವ್ ವನಮಾಲ ಆನಂದರಾವ್ರವರು ಆರೋಪಿ ದಯಾನಂದನನ್ನು ಕೊಲೆ ಆರೋಪದಿಂದ ದೋಷ ಮುಕ್ತಗೊಳಿಸಿ ಬಿಡುಗಡೆ ಮಾಡಿ ತೀಪರ್ು ನೀಡಿದ್ದಾರೆ.
ಆರೋಪಿಯ ಪರ ಸುಳ್ಯದ ವಕೀಲ ಎಂ.ವೆಂಕಪ್ಪ ಗೌಡ ಹಾಗೂ ಪುತ್ತೂರಿನ ವಕೀಲ ಬಿ.ಶೀನಪ್ಪ ಗೌಡರು ವಾದಿಸಿದ್ದರು.

By suddi9

Leave a Reply

Your email address will not be published. Required fields are marked *