ಸುಳ್ಯ: ವಿಮಾ ಗ್ರಾಮ, ವಿಮಾ ಶಾಲೆಯಂತಹ ಹೊಸ ಹೊಸ ಯೋಜನೆಯಂತೆ ಪ್ರತೀ ವರ್ಷವೂ ಎಲ್ಲೈಸಿ ಗ್ರಾಹಕರ ಬಳಿಗೆ ಹೋಗುತ್ತಿದ್ದು, ಈ ಬಾರಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ.

ಎಲ್ಲೈಸಿ ಸುಳ್ಯದ ಉಪಗ್ರಹ ಶಾಖೆಯ ವತಿಯಿಂದ ಈ ಯೋಜನೆಗೆ ಮಂಡೆಕೋಲಿನ ರಾಮಕುಮಾರ್ ಹೆಬ್ಬಾರ್ ಅವರ ಮನೆಗೆ ಭೇಟಿ ನೀಡುವ ಮೂಲಕ ಗುರುವಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮತದಾರರ ಪಟ್ಟಿಯಂತೆ ಮನೆ ಮನೆಗಳಿಗೆ ಭೇಟಿ ನೀಡುವ ಉದ್ದೇಶವಾಗಿದ್ದು, ಈಗಿರುವ ಪಾಲಿಸಿ, ನಿಂತು ಹೋದ ಪಾಲಿಸಿ, ಹೊಸ ಪಾಲಿಸಿ ಇತ್ಯಾದಿ ವಿವರಗಳನ್ನು ಮಾಹಿತಿಯನ್ನು ಸಂಗ್ರಹಿಸಲಾಯಿತು.
ಪುತ್ತೂರು, ಸುಳ್ಯ ಶಾಖೆಗಳ ಈ ಯೋಜನೆಯ ಸಲಹೆಗಾರರಾದ ಉಡುಪಿಯ ಬಾಲಕೃಷ್ಣ ನಾಯಕ್ ಈ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ಶಾಖೆಯ ಹಿರಿಯ ಶಾಖಾಧಿಕಾರಿ ಬಾಲಕೃಷ್ಣ, ಸುಳ್ಯ ಉಪಗ್ರಹ ಶಾಖೆಯ ಶಾಖಾಧಿಕಾರಿ ಆನಂದ ಶಾಸ್ತ್ರಿ, ಅಭಿವೃದ್ಧಿ ಅಧಿಕಾರಿಯವರಾದ ಗಣೇಶ್ ಹೆಗಡೆ, ಉಮೇಶ್ ನಾಯಕ್, ಕೆ.ಶ್ರೀನಿವಾಸ್, ಪಿ.ಜಯಕುಮಾರ್ ಮತ್ತು ಶಮರ್ಿಳಾ ರಾಮಕುಮಾರ್ ಹಾಗೂ ಅವರ ಮಕ್ಕಳು ಉಪಸ್ಥಿತರಿದ್ದರು.
