ಬಂಟ್ವಾಳ: ಬಿಸಿರೋಡ್ ಅಜ್ಜಿಬೆಟ್ಟು ಶಾಲಾ ಬಳಿ ಬಸವ ಮಂಟಪದಲ್ಲಿ ಅ.2ರಂದು ಬೆಳಿಗ್ಗೆ 10.30ಕ್ಕೆ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ ನಡೆಯಲಿದೆ. ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ರ್ಖತ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ದಯಾನಂದ ಪಿಲಿಕೂರು ಶಿಬಿರದ ತರಬೇತಿಯನ್ನು ನೀಡಲಿದ್ದಾರೆ.
ಯಕ್ಷಗಾನದ ವಿವಿಧ ಪ್ರಕಾರಗಳಾದ ನಾಟ್ಯ, ಕುಣಿತ, ಹಾಡುಗಾರಿಕೆ, ಹಿಮ್ಮೇಳ, ಮುಮ್ಮೇಳಗಳ ವಿವಿಧ ವಿಚಾರಗಳ ಬಗ್ಗೆ ಹಂತಹಂತವಾಗಿ ತರಬೇತಿ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

