ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ವಾರ್ಡಿನ ಸುಮಾರು 25 ವರ್ಷಗಳ ಬೇಡಿಕೆಯಾಗಿರುವ ಆಲಡ್ಕದಿಂದ ಉಪ್ಪುಗುಡ್ಡೆ ಸಂರ್ಪಕಿಸುವ ಕಾಲುದಾರಿಗೆ ಸುಮಾರು 3.30 ಲಕ್ಷ ವೆಚ್ಚದಲ್ಲಿ ರಚಿಸಿದ ಮೆಟ್ಟಿಲುಗಳನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಹಂತಹಂತವಾಗಿ ಜನರ ಎಲ್ಲಾ ಬೇಡಿಕಗಳನ್ನು ಈಡೇರಿಸುವ ಮೂಲಕ ಸಮಸ್ಯೆ ನಿವಾರಣೆಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಉಳಿದ ಎಲ್ಲಾ ವಿದಾನ ಸಭಾ ಕ್ಷೇತ್ರಗಳಿಂತಲೂ ಹೆಚ್ಚು ಕೆಲಸ ಮಾಡಿದ ಕ್ಷೇತ್ರ ಬಂಟ್ವಾಳ ಎನ್ನುವುದಕ್ಕೆ ಹೆಮ್ಮೆ ಆಗುತ್ತದೆ ಎಂದರು. ಅಕ್ಟೋಬರ್ 3ರಂದು ಬಿಸಿರೋಡಿನ ಪಾರ್ಕುನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿಲಿದ್ದಾರೆ. ಅವರು ಕೊಯಿಲ ಪಶು ವೈಧ್ಯಕೀಯ ಕಾಲೇಜು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಉದ್ಘಾಟನೆ ಮಾಡಲಿದ್ದಾರೆ ಎಂದು ಇದೇ ಸಂದರ್ಭ ಹೇಳಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಸದಸ್ಯ ಸದಾಶಿವ ಬಂಗೇರ,ನಾಮ ನಿರ್ದೇಶಿತ ಸದಸ್ಯ ಸಿದ್ದೀಕ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಾಜಿ ಸದಸ್ಯ ರಪೀಕ್, ಮಾಜಿ ಟ್ರಿಬ್ಯುನಲ್ ಸದಸ್ಯ ಅಹ್ಮದ್ ಭಾವ ಯಾಸೀನ್ ,ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು, ಸಜೀಪ ಮುನ್ನೂರು ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಶರೀಫ್ ನಂದಾವರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತ ಕಾರ್ಯದರ್ಶಿ ಇಸ್ಮಾಯಿಲ್ ಪಡ್ಪು ಗುತ್ತಿಗೆದಾರ ಲತೀಫ್ ದಾಸರಗುಡ್ಡೆ ಉಪಸ್ಥಿತರಿದ್ದರು. ಪುರಸಭಾ ಸದಸ್ಯೆ ಚಂಚಲಾಕ್ಷಿ ಸ್ವಾಗತಿಸಿ ನಿತಿನ್ ಬಂಗ್ಲೆಗುಡ್ಡೆ ಧನ್ಯವಾದ ನೀಡಿದರು, ಪರ್ತಕರ್ತ ಆಶ್ರಫ್ ಕಾರ್ಯಕ್ರಮ ನಿರೂಪಿಸಿದರು.

