ಮುಂಬಯಿ: ದಿ.ಮಹಾರಾಷ್ಟ್ರಸ್ಟೇಟ್ ಕೋ.ಅಪರೇಟಿವ್‍ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ `ಉತ್ಕೃಷ್ಟಬ್ಯಾಂಕ್’ ಪುರಸ್ಕೃತ ಹಾಗೂ ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್’ಸ್‍ನಿಂದ
`ಶ್ರೇಷ್ಠ ಬ್ಯಾಂಕ್’ ಪ್ರಶಸ್ತಿ ವಿಜೇತ ಮೊಡೇಲ್ ಕೋ.ಆಪರೇ ಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 20ನೇ ನೂತನ ಶಾಖೆಯನ್ನು ಅಕ್ಟೋಬರ್.01ನೇ ಶನಿವಾರ ಪೂರ್ವಾಹ್ನ 10.30 ಗಂಟೆಗೆ ಭಯಂದರ್ ಪಶ್ಚಿಮದ ಪಾಠಕ್
ರಸ್ತೆಯ ಸಲ್ಸಾರ್ ಟವರ್ ಮುಂಭಾಗದಲ್ಲಿನ ಕಮಥೀಯ ಭವನ ಕಟ್ಟಡದಲ್ಲಿ ಉದ್ಘಾಟಿಸಲಿದೆ.

modelbank-logo

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಭಯಂದರ್ ಪಶ್ಚಿಮದಲ್ಲಿನ ಅವರ್ ಲೇಡಿ ಆಫ್ ನಝರೆತ್ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಆನ್ಸ್‍ಲಮ್ ಗೋನ್ಸಾಲ್ವಿಸ್ ಶಾಖೆಯನ್ನು ಅನುಗ್ರಹಿಸಲಿದ್ದು, ಮುಖ್ಯ ಅತಿಥಿಯಾಗಿ ವಿೂರಾಭಯಂದರ್ ಮುನ್ಸಿಪಾಲ್ ಕಾರ್ಪೊರೇಶನ್‍ನ ಆಯುಕ್ತಡಾ| ನರೇಶ್ ಬಿ.ಗಿತೆ (ಐಎಎಸ್) ಆಗಮಿಸಲಿದ್ದಾರೆ.

albert-w-dsouza-3

ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿಬ್ಯಾಂಕ್‍ನ ಗ್ರಾಹಕರು, ಶೇರುದಾರರು ಮತ್ತು ಹಿತೈಷಿಗಳು ಆಗಮಿಸಿ ಶಾಖೆಯ ಸರ್ವೋನ್ನತಿಗೆ ಶುಭ ಹಾರೈಸುವಂತೆ ಬ್ಯಾಂಕ್‍ನ ಮಹಾ ಪ್ರಬಂಧಕ ಮತ್ತು ಮುಖ್ಯ
ಕಾರ್ಯನಿರ್ವಹಣಾ ಅಧಿಕಾರಿಯಾಗಿ ವಿಲಿಯಂ ಎಲ್. ಡಿ’ಸೋಜಾ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *