ಬಂಟ್ವಾಳ: ಬ್ಲಾಕ್ ಸೊಸೈಟಿಯ ಎಲ್ಲಾ ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸ ಇಲಾಖೆಯ ಸಹಕಾರದಲ್ಲಿ ನಡೆಯುತ್ತಿದೆ ಎಂದು ವಿಟ್ಲ ಸಿಡಿಪಿಓ ಸುಧಾ ಜೋಷಿ ಹೇಳಿದರು.
ಅವರು ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ(ರಿ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2015-16 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸೊಸೈಟಿ ಇನ್ನಷ್ಟು ಬೆಳೆಯುತ್ತದೆ ಎಂದರು.
ಬಂಟ್ವಾಳ ಸಿಡಿಪಿಓ ಮಲ್ಲಿಕಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಫಲ್ಗುಣಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೀತಾ ಜಯತೀರ್ಥ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷೆ ಸರೋಜಾ ಡಿ.ಶೆಟ್ಟಿ, ಸದಸ್ಯರುಗಳಾದ ಸ್ವರ್ಣ ಕುಮಾರಿ, ಶಾರದಾ, ಉಷಾಕೃಷ್ಣಪ್ಪ, ಲೋಲಾಕ್ಷಿ, ದಯಾವತಿ, ಫ್ಲೋರಿನ್ ಪಿರೇರಾ, ಪ್ರೇಮಾವತಿ ಉಪಸ್ಥಿತರಿದ್ದರು. ಇದೇ ಸಂದರ್ಭ ಬ್ಲಾಕ್ ಸೊಸೈಟಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಹಾಗೂ ಸಿಡಿಪಿಓ ಮಲ್ಲಿಕಾ ಮತ್ತು ರಿಚಾರ್ಡ್ ಡಿ’ಸೋಜಾ ಅವರನ್ನು ಗೌರವಿಸಲಾಯಿತು. ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಸ್ವಾಗತಿಸಿ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಕೋಶಾಧಿಕಾರಿ ನಸೀಮಾ ವಂದಿಸಿದರು. ಮೇಲ್ವಿಚಾರಕಿ ಸಿಂಧು ನಿರೂಪಿಸಿದರು.

