ಮಂಗಳೂರು: ಶ್ರೀ ರಾಮಸೇನೆಯ ದಕ್ಷಿಣ ಪ್ರಾಂತದ ರಾಜ್ಯ ಬೈಠಕ್ ಪ್ರಾಂತ ಅಧ್ಯಕ್ಷ ಮಹೇಶ್ ಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನ ಶ್ರೀ ವೀರಾಂಜನೇಯ ದೇವಸ್ಥಾನ ವಿಜಯ ಪುರದಲ್ಲಿ ಸೋಮವಾರ ನಡೆಯಿತು.
ಈ ಬಾರಿಯ ದತ್ತ ಪೀಠ ಉತ್ಸವವನ್ನು ನ.12 ರಿಂದ 20 ರವರೆಗೆ ಆಚರಿಸಲು ತೀರ್ಮಾನಿಸಲಾಯಿತು. ವಿಶೇಷವಾಗಿ ಉತ್ತರ ಭಾರತದ ನಾಲ್ಕು ಅಖಾಡದಿಂದ 54 ಸಾಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶೋಭಾಯಾತ್ರೆಯು ಚಿಕ್ಕಮಗಳೂರಿನಲ್ಲಿ ನ.20 ರಂದು ನಡೆಯಲಿದೆ. ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಿ ಎನ್ನುವ ಒತ್ತಾಯವನ್ನು ಅ.17 ರಂದು ದಕ್ಷಿಣ ಪ್ರಾಂತದ ಎಲ್ಲಾ ಜಿಲ್ಲಾ ತಾಲೂಕು ಮಟ್ಟದಲ್ಲಿ ಡಿ.ಸಿ.ಯವರಿಗೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪಾಲ್ಕೆ ಪ್ರಾಸ್ತವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಪರಶುರಾಮ್ ನಡುಮನಿ, ಶಿವಮೊಗ್ಗ ವಿಭಾಗ ಅಧ್ಯಕ್ಷ ಶಾರದಮ್ಮ, ಮಂಗಳೂರು ವಿಭಾಗ ಅಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಉಪಸ್ಥಿತರಿದ್ದರು.

