ಮಂಗಳೂರು: 16ನೇ, 17 ನೇ ಮತ್ತು 18 ಸಪ್ಟಂಬರ್ 2016 ರಂದು ವೆಬ್ ಡಿಸೈನಿಂಗ್ ವಿಷಯದಲ್ಲಿ 3 ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ನಡೆಸಲಾಯಿತು. ವಿವಿಧ ಕಾಲೇಜುಗಳ ಸುಮಾರು 170 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಡಾ. ಅಬ್ದುಲ್ ಶರೀಫ಼್ ಪ್ರಾಂಶುಪಾಲರು, ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಶ್ರೀ. ಶಶಾಂಕ್ ಮತ್ತು ಶ್ರೀ. ಅನ್ಶು ಪಾಂಡೆ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ, ಡಾ. ಶರ್ಮಿಳಾ ಕುಮಾರಿ, ಕಾರ್ಯಾಗಾರದ ಸಂಯೋಜಕರಾದ ಪ್ರೊ. ಮೊಹಮ್ಮದ್ ಹಫೀಜ಼್ ಮತ್ತು ಪ್ರೊ. ಗಣೇಶ್ ಪೈ, ವಿದ್ಯಾರ್ಥಿಗಳ ಸಂಯೋಜಕರಾದ ಶ್ರೀ. ಅಬ್ದುಲ್ ಮಲಿಕ್ ಇಸ್ಮಾಯಿಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಅಬ್ದುಲ್ ಶರೀಫ಼್ ಪ್ರಾಂಶುಪಾಲರು, ಅಧ್ಯಕ್ಷೀಯ ಭಾಷಣದಲ್ಲಿ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಭವಿಷ್ಯವನ್ನು ನಿರೂಪಸಲು ಸಹಾಯವಾಗುವುದೆಂದು ತಿಳಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ, ಡಾ. ಶರ್ಮಿಳಾ ಕುಮಾರಿ, ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಂತ್ರಾಂಶಗಳನ್ನು ಕಲಿಯುವ ಅಗತ್ಯದ ಬಗ್ಗೆ ಸಲಹೆಯನಿತ್ತರು ಹಾಗೂ ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಿದರು. ಈ 3 ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಜೊತೆ ವೆಬ್ ಡಿಸೈನಿಂಗ್ ಸ್ಪರ್ಧೆಯನ್ನು ಇಡಲಾಗಿತ್ತು.
ಇದರ 4 ವಿಜೇತರೆಂದರೆ: ಶ್ರೀ. ಅಮೀನ್ ಅಬ್ದುಲ್ಲಾ, ಪೇಸ್, ಮಂಗಳೂರು, ಶ್ರೀ. ಕ್ಲೈಡ್ ಶೆಲ್ಟನ್, ಮೈಟ್ ಮೂಡುಬಿದ್ರಿ, ಶ್ರೀ. ಚೇತನ್ ಎಸ್. ಸಿ., ವಿಸಿಈಟಿ., ಪುತ್ತೂರು ಮತ್ತು ಹೆಗ್ಡೆ ದೀಕ್ಷಿತ್, ಮೈಟ್, ಮೂಡಬಿದ್ರಿ. ಐನ್ಬಿಸಿ ಇಂಡಿಯ ಮತ್ತು ಐ-ಮೆಡಿಟಾ ಈ ಸ್ಪರ್ಧಾಳುಗಳಿಗೆ ದೇಶದ ಯಾವುದೇ ಭಾಗದಲ್ಲಿ ಕಾರ್ಯಾಗಾರಕ್ಕೆ ಹಾಜರಾಗಲು ಉತ್ತಮ ಕೊಡುಗೆಗಳನ್ನು ನೀಡಿದರು.
ವಿದ್ಯಾರ್ಥಿನಿ ಕ್ರತಿ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕು. ಜ್ಯೋತ್ಸ್ನಾ ಸ್ವಾಗತಿಸಿದರು. ಶ್ರೀ. ಅಬ್ದುಲ್ ಮಲಿಕ್ ಇಸ್ಮಾಯಿಲ್ ವಂದಿಸಿದರು.

