ಸುಬ್ರಹ್ಮಣ್ಯ : ಮಂಗಳೂರಿನಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಕಂಡಕ್ಟರ್ ಸುಬ್ರಹ್ಮಣ್ಯ-ಕುಮಾರಧಾರ ಸೇತುವೆ ಬಳಿ ಬಸ್ ಚಾಲನೆ ನಿಧಾನವಾಗಿ ಚಲಿಸಿದ ಸಂದರ್ಭ ನದಿಗೆ ಹಾರಿದ ಘಟನೆ ಸೆ.25ರಂದು ನಡೆದಿದೆ.
ಬಸ್ ಪ್ರಯಾಣಿಕ ಮಹಿಳೆಯೊಬ್ಬಳ ಜೊತೆ ಚಿಲ್ಲರೆ ಹಣ ನೀಡುವ ಕುರಿತ ವಿವಾದದಿಂದ ಬೇಸತ್ತ. ಕೆ ಎಸ್ ಟಿ ಸಿ ಬಸ್ ಕಂಡಕ್ಟರ್, ಕೈಕಂಬ ವಾಮಂಜೂರಿನ ನಿವಾಸಿ ದೇವದಾಸ (45ವ) ಎನ್ನುವವರು ನದಿಗೆ ಹಾರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಿಳಾ ಪ್ರಯಾಣಿಕೆ ಕಂಡಕ್ಟರ್ ದೇವದಾಸ ಬಳಿ ತಾನು ರೂ.500 ನೀಡಿದ್ದೇನೆ. ನನಗೆ ಚಿಲ್ಲರೆ ಕೊಡಬೇಕೆಂದು ಹೇಳಿದಾಗ, ಅದನ್ನು ಒಪ್ಪದ ದೇವದಾಸ ನೀವು ರೂ.100ರ ನೋಟು ಕೊಟ್ಟಿದ್ದೀರಿ ಎಂದು ಹೇಳಿದರು. ಇದರಿಂದ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕಡಬ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾತುಕತೆ ನಡೆದು ಬಸ್ ತನ್ನ ಪ್ರಯಾಣ ಮುಂದುವರಿಸಿತು. ಆದರೆ ಮಹಿಳಾ ಪ್ರಯಾಣಿಕೆ ಮತ್ತೆ ಚಿಲ್ಲರೆ ಪ್ರಶ್ನೆಯನ್ನೆತ್ತಿ ಕಂಡಕ್ಟರ್ ಜೊತೆ ವಾದ ಬೆಳೆಸಿದರು. ಇದರಿಂದ ಬೇಸರದಿಂದ ಕಂಡಕ್ಟರ್ ನದಿಗೆ ಹಾರಿದ್ದಾನೆ. ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಗೋಪಾಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆ ಎಸ್ ಟಿ ಸಿ ಬಸ್ ಮಂಗಳೂರು ಒಂದನೇ ಘಟಕಕ್ಕೆ ಸೇರಿದೆ.
.

