ಧರ್ಮಸ್ಥಳ: ಸೆ. 18ರಂದು ಭಾನುವಾರ ಮಂಜೇಶ್ವರದ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಕಮ್ಮಟವನ್ನು ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.ಸೆ. 25ರಂದು ಭಾನುವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಶುಭಾಶಂಸನೆ ಮಾಡುವರು. ಬೆಂಗಳೂರಿನ ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಕೆ. ವಸಂತ ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಬೆಂಗಳೂರಿನ ಎಂ.ಎಸ್. ಗಿರಿಧರ, ಶಂಕರ್ ಶ್ಯಾನುಭಾಗ್, ರಾಮಕೃಷ್ಣ ಕಾಟುಕುಕ್ಕೆ, ಮಂಗಳೂರಿನ ಮೋಹನದಾಸ್ ಶೆಣೈ, ದೇವದಾಸ ಪ್ರಭು, ಮಂಗಲದಾಸ್ ಗುಲ್ವಾಡಿ, ಮಣಿಪಾಲದ ಉಷಾ ಹೆಬ್ಬಾರ್, ಉಡುಪಿಯ ರಮೇಶ್ ಕಲ್ಮಾಡಿ, ಶಂಕರ್ ಮತ್ತು ಸಂಗೀತಾ ಬಾಲಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡುವರು.ನೃತ್ಯ ಭಜನೆ: ಸೆ. 25 ರಂದು ಭಾನುವಾರ ಇನ್ನೂರು ಭಜನಾ ಮಂಡಳಿಗಳ ಎರಡು ಸಾವಿರ ಭಜನಾ ಪಟುಗಳಿಂದ ನೃತ್ಯ ಭಜನೆ ನಡೆಯಲಿದೆ.ಪ್ರತಿ ವರ್ಷ ಭಜನಾ ಕಮ್ಮಟ ಏರ್ಪಡಿಸುತ್ತಿದ್ದು ರಾಗ, ತಾಳ, ಲಯ ಬದ್ಧವಾಗಿ ಶಿಸ್ತಿನಿಂದ ಭಜನೆ ಹಾಡುವ ಬಗ್ಯೆ ತರಬೇತಿ ನೀಡುವುದಲ್ಲದೆ ಪ್ರಾರ್ಥನೆ, ಯೋಗಭ್ಯಾಸ , ಧ್ಯಾನ, ಮಾನವೀಯ ಮೌಲ್ಯಗಳ ಉದ್ದೀಪನದ ಬಗ್ಯೆಯೂ ಮಾರ್ಗದರ್ಶನ ನೀಡಲಾಗುತ್ತದೆ.
