ಬಂಟ್ವಾಳ: ಶಿಕ್ಷಣ ಇಲಾಖೆ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹಯೋಗದೊಂದಿಗೆ ಸೆಪ್ಟೆಂಬರ್ 24ರಂದು, ಸರೋಜಿನಿ ಮಧುಸೂಧನ ಕುಶೆ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಸುದಾನ ಶಾಲೆಯ ವಿದ್ಯಾರ್ಥಿಗಳಾದ ಪ್ರತ್ಯೂಷ್ ಹೆಬ್ಬಾರ್ (10), ಅಭಿಷೇಕ ಕೆ. ಎಸ್ (10), ಮನೀಶ್ ಶೆಟ್ಟಿ ಬಿ.ಎಮ್(9) ಮತ್ತು ಜೀವಿತ್ ರೈ (9) ರವರು ವಿಜೇತರಾಗಿದ್ದಾರೆ.
ಸತತ ಏಳನೇ ಬಾರಿಗೆ ಸುದಾನ ವಸತಿ ಶಾಲೆ ಗೆಲುವನ್ನು ಗಳಿಸಿದ್ದು, ಒಕ್ಟೋಬರ್ 20 ರಂದು ನಡೆಯಲಿರುವ ಮೈಸೂರು ವಿಭಾಗೀಯ ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ಇದೇ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರಿಗೆ ಶಾಲಾ ಕಂಪ್ಯೂಟರ್ ಶಿಕ್ಷಕ ಶ್ರೀ ಸುಂದರ್ ನಾವೂರು ತರಬೇತಿ ನೀಡಿದ್ದಾರೆ.

