ಬಂಟ್ವಾಳ: ಕಲ್ಲಡ್ಕ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ನಾಗರಾಜ ರಾಮನಗರ ಆಯ್ಕೆಯಾಗಿದ್ದಾರೆ. ಇತ್ತೀಚೆಗ ಕಲ್ಲಡ್ಕ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಸಂಘದ ಗೌರವಾಧ್ಯಕ್ಷ ನರಸಿಂಹ ಕೆ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ 39ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.

nagaraja-ramanagara

ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ರಾಮನಗರ , ಶಿವರಾಮ ಕೊಳಕೀರು, ಪ್ರತೀಕ್ಷಾ ಪ್ರಭು, ಉಪಾಧ್ಯಕ್ಷರಾಗಿ ವಜ್ರನಾಥ ಮಡ್ಲಮಜಲು, ದಿವ್ಯಾರಾಘವೇಂದ್ರ ಆಚಾರ್ಯ ಆಯ್ಕೆಯಾದರು. ಕೋಶಾಧಿಕಾರಿಯಾಗಿ ಗಣೇಶ್ ಶೆಟ್ಟಿ, ರಾಜೇಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ರಾಮನಗರ, ವಿಜಯ, ವಿಕ್ರಂ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗೋಪಾಲ, ಯತೀಶ್ ಕಲ್ಲಡ್ಕ ಆಯ್ಕೆಯಾದರು. ಹಿರಿಯರಾದ ಚಿ.ರಮೇಶ್ ಕಲ್ಲಡ್ಕ, ಚಿದಾನಂದ ಆಚಾರ್ಐ, ವಿಶ್ವನಾಥ ಕುಕ್ಕಮಜಲು, ಯತೀನ್ ಏಳ್ತಿಮಾರ್ ಸಭೆಯಲ್ಲಿ ಹಾಜರಿದ್ದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *