ಮೂಡುಬಿದಿರೆ: ಆಳ್ವಾಸ್ ಪ್ರಥಮ ವರ್ಷದ ಬಿಎಚ್ಎಸ್ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ಸಮೀಪದ ಮರೋಳಿಯ ಆಶ್ರಮಕ್ಕೆ ತೆರಳಿ ಮಕ್ಕಳಿಗೆ ಕಲಿಕಾ ಸಾಮಾಗ್ರಿ, ತರಕಾರಿ, ದವಸಧಾನ್ಯಗಳನ್ನು ವಿತರಿಸಿದರು.
ವಿದ್ಯಾರ್ಥಿಗಳು ತಾವು ಉಳಿಸಿದ ಹಣದಲ್ಲಿ ಆಶ್ರಮದ ಮಕ್ಕಳಿಗೆ ಪರಿಕರಗಳನ್ನು ಒದಗಿಸಿದ್ದು, ಆಶ್ರಮದ 52 ಪುಟಾಣಿಗಳ ಅವಶ್ಯತೆಗೆ ಸ್ಪಂದಿಸಿದರು.


