ಬಂಟ್ವಾಳ : ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ಇದರ ಸಲಹಾ ಸಮಿತಿ ಸಭೆಯು ಬಿರ್ವಸೆಂಟರ್ ನಲ್ಲಿ ಸಂಜೀವ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಮಂಡಲದ ವತಿಯಿಂದ ದ.ಕ.ಜಿಲ್ಲೆಯಾದ್ಯಂತ ಸ್ವಸಹಾಯ ಗುಂಪುಗಳ ರಚನೆ ಹಾಗೂ ನಿರ್ವಹಣೆ ಈಗಾಗಲೇ ಪ್ರಾರಂಭವಾಗಿದ್ದು ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು.

x-3

ಮೂರ್ತೆದಾರರ ಸೇವಾ ಸಹಕಾರಿ ಸಂಘಗಳನ್ನು ಆರ್ಥಿಕ ಸಬಲೀಕರಣಕ್ಕಾಗಿ ಬ್ಯಾಂಕಿಂಗ್ ವ್ಯವಹಾರ ನಡೆಸಲು ತೀರ್ಮಾನಿಸಲಾಗಿದೆ. ಮಹಾಮಂಡಲದ ಉಪಾಧ್ಯಕ್ಷ ಶಿವಪ್ಪ ಸುವರ್ಣ, ನಿರ್ದೇಶಕರಾದ ನೋಣಯ್ಯ ಪೂಜಾರಿ, ಬಿ.ವಿಶ್ವನಾಥ, ಬೇಬಿ ಕುಂದರ್, ವಿಶ್ವನಾಥ ಕೊಕ್ಕಡ, ರಾಜೇಶ್ ಸುವರ್ಣ, ಪಿ.ಕೆ.ರಾಮಣ್ಣ ಪೂಜಾರಿ, ಲಕ್ಷ್ಮಣ ಕೋಟ್ಯಾನ್, ಉಷಾ ಅಂಚನ್, ವಿಠಲ ಪೂಜಾರಿ, ವಿಜಯ ಕುಮಾರ್ ಸೊರಕೆ, ಬಿ.ಎನ್.ಸನಿಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯೋಜನಾಧಿಕಾರಿ ರಾಘವ ಎಚ್. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ವಂದಿಸಿ ರೋ ಶನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *