ಮೂಡುಬಿದಿರೆ: ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರೌಢಶಾಲೆಯ ಬಾಲಕ, ಬಾಲಕಿಯರು 4 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಪಡೆದು 17 ವರ್ಷ ವಯೋಮಿತಿಯ ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಭಾರತಿ ಶಿವಾನಂದ ನಾಯ್ಕ (ರಿದಮಿಕ್ ಯೋಗ) ಪ್ರಥಮ, 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪೂಜಾ ತಲ್ವಾರ್ (ಆರ್ಟಿಸ್ಟಿಕ್ ಯೋಗ)ದಲ್ಲಿ ಪ್ರಥಮ, ನಿರ್ಮಲ ಸುಭಾಶ್ ಪ್ರಥಮ, ಪೂಜಾ-ತೃತೀಯ, ಸವಿತಾ ಚತುರ್ಥ ಸ್ಥಾನ ಪಡೆದುಕೊಂಡಿದ್ದಾರೆ.
17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮಿಲನ್ ಲೋಕೇಶ್-ಪ್ರಥಮ, 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಪವನ್ -ದ್ವಿತೀಯ ಸ್ಥಾನಿಯಾಗಿದ್ದಾರೆ. ಜಿಲ್ಲೆಯ ಯೋಗ ಕುಮಾರ ಪ್ರಶಸ್ತಿ ಪವನ್ ಹಾಗೂ ಜಿಲ್ಲೆಯ ಯೋಗ ಕುಮಾರಿ ಪ್ರಶಸ್ತಿಯನ್ನು ನಿರ್ಮಲ ಸುಭಾಶ್ ತಮ್ಮದಾಗಿಸಿಕೊಂಡಿದ್ದಾರೆ.

