ಉಡುಪಿ: ಜೇಸಿಐ ಪರ್ಕಳದ ಜೇಸಿ ಸಪ್ತಾಹದ ಅಂಗವಾಗಿ ಬೃಹತ್ ವಾಹನ ಜಾಥಾ ಮತ್ತು ವಿಶ್ವ ಶಾಂತಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೆ.13 ರಂದು ಪರ್ಕಳದ ಪೇಟೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಸಿಟಿ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಉದ್ಘಾಟಿಸಿದರು. ವೇದಿಕೆಯಲ್ಲಿ ಅಧ್ಯಕ್ಷ ಮರಿಯಪ್ಪ, ಶೆರ್ಲಿ ಮನೋಜ್, ರಮ್ಯ ನಾಯಕ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

