ಬಂಟ್ವಾಳ:ತುಳು ಚಲನಚಿತ್ರ,ರಂಗಭೂಮಿ ಕಲಾವಿದ ,ನಾವೂರು ಗ್ರಾಮದ ಕನಪಾದೆ ನಿವಾಸಿ ರಾಜೇಶ್ ಬಂಟ್ವಾಳ್(46)ಅಸೌಖ್ಯದಿಂದ ಮಂಗಳೂರು ಖಾಸಗಿಆಸ್ಪತ್ರೆಯಲ್ಲಿ ಸೆ.9 ರಂದು ನಿಧನ ಹೊಂದಿದರು.ಮೃತರು ತಾಯಿ,ಸಹೋದರಿಯನ್ನು ಅಗಲಿದ್ದಾರೆ.

1009pkt1rajesh-bantwal
ಕನಪಾದೆ ರಾಘವ ಆಚಾರ್ಯ-ವಾರಿಜ ದಂಪತಿಯ ಐವರು ಮಕ್ಕಳಲ್ಲಿ ದ್ವಿತೀಯ ಪುತ್ರರಾಗಿದ್ದ ರಾಜೇಶ್ ಅವರು ವೃತ್ತಿಯಲ್ಲಿ ಮೂಲತ: ಸ್ವರ್ಣಕುಸುರಿ ಕೆಲಸಗಾರರಾಗಿದ್ದರು.ಕಳೆದ 28 ವರ್ಷಗಳಿಂದ ರಂಗಭುಮಿಯಲ್ಲಿ ಸಕ್ರಿಯರಾಗಿದ್ದ ರಾಜೇಶ್ ದಿ.ಶಾಂತಾರಾಮ ಕಲ್ಲಡ್ಕ ಅವರ ಲೈನ್‍ತಾಗ್‍ಂಡಾ ನಾಟಕದ ಮೂಲಕ ರಂಗಭೂಮಿಗೆ ಪದಾರ್ಪಣೆಗೊಂಡು ಅವರ ಗರಡಿಯಲ್ಲಿ ಪಳಗಿದ್ದರು.ಬಳಿಕ ಪಂಡ ನಂಬಯರ್ ನಾಟಕದ ಮೂಲಕ ಲ|ದೇವದಾಸ್ ಕಾಪಿಕಾಡ್‍ಅವರ ಚಾ ಪರ್ಕ ತಂಡಕ್ಕೆ ಸೇರಿ ಪುದರ್ ದೀತಿಜಿ,ಅಕ್ಕ ಸಹಿತ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು.ವಿಜಯ ಕುಮಾರ್ ಕೋಡಿಯಾಲ್‍ಬೈಲ್ ಅವರ ಕಲಾಸಂಗಮದಲ್ಲಿ 15 ವರ್ಷಗಳ ಕಾಲ ಸದಸ್ಯರಾಗಿ ಬಹುತೇಕ ಎಲ್ಲಾ ನಾಟಕಗಳಲ್ಲಿ ಅಭಿನಯಿಸಿದ್ದರು.ಒರಿಯೊರ್ದೊರಿ ಅಸಲ್,ಮಂಡೆ ಬಲಿಪುಜಿ,ವಿದ್ದು,ಅಸಲ್ ಮೂರ್ತಿಲು ಅಕ್ಲೆಲೆಕ್ಕ ಎಂಕುಲತ್ತ್,ಮಾಮುಗೊಂಜಿ ಮಾಮಿ,ಭೋಜ ಬುಡಿಯೆರೆಗೆ ,ಕೋಡೆ ಇನಿ ಎಲ್ಲೆ ಮೊದಲಾದವು ಅವರ ಖ್ಯಾತ ನಾಟಕಗಳು .ಅಸಲ್ ಏರ್ ನಾಟಕದಲ್ಲಿ ರಾಜೇಶ್ ಅವರ 4 ಪಾತ್ರಗಳ ಮಿಂಚಿನ ಅಭಿನಯ ಜನಪ್ರಿಯವಾಗಿತ್ತು.ಕೆ.ಎನ್.ಟೇಲರ್ ಅವರ ಗಣೇಶ ನಾಟಕ ಸಭಾ,ದಿನೇಶ್ ಕಂಕನಾಡಿ ಅವರ ಆಸರೆ ಕಲಾವಿದರು ಮೊದಲಾದ ತಂಡಗಳಲ್ಲದೆ ದ.ಕ.ಜಿಲ್ಲೆಯ ವಿವಿಧ ಊರುಗಳ ಸಂಘ ಸಂಸ್ಥೆಗಳ ನಾಟಕಗಳಲ್ಲಿ ಅಭಿನಯಿಸಿದ್ದರು.ಕಡಲಮಗೆ,ಒರಿಯೊರ್ದೊರಿ ಅಸಲ್,ಎಕ್ಕಸಕ್ಕ ತುಳು ಚಲನಚಿತ್ರ,ಸಂಕಲ್ಪ ತುಳು ಧಾರಾವಾಹಿಯಲ್ಲಿ ನಟಿಸಿದ್ದರು.ಹಿಂದೂ ಯುವ ಸೇನೆಯ ಸದಸ್ಯರಾಗಿದ್ದರು.
ಅಸೌಖ್ಯದಿಂದಿದ್ದರೂ ರಂಗಭೂಮಿಯ ನಂಟು ಬಿಡದ ರಾಜೇಶ್ ಅವರು ತನ್ನೂರಿನ ಯುವಕರ ಕಲಾನಿ„ ತಂಡದ ನಾಟಕ ನಿರ್ದೇಶಿಸಿ ಅಭಿನಯಿಸಿದ್ದರು.ಸೆ.10 ರಂದು ಅವರ ಊರಲ್ಲೇ ಆ ನಾಟಕ ಪ್ರದರ್ಶನವಿದ್ದು ಮುನ್ನಾದಿನವೇ ಅಸ್ತಂಗತರಾಗಿದ್ದಾರೆ.
ಜಿಲ್ಲಾ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್‍ಡಿ.ಶೆಟ್ಟಿ,ಪ್ರಮುಖರಾದ ವಿಜಯಕುಮಾರ್ ಕೋಡಿಯಾಲ್‍ಬೈಲ್,ಭೋಜರಾಜ್ ವಾಮಂಜೂರು,ಅರವಿಂದ ಬೋಳಾರ್ ಸಹಿತ ವಿವಿಧ ನಾಟಕ ತಂಡಗಳ ಕಲಾವಿದರು ಅಂತಿಮ ದರ್ಶನ ಪಡೆದರು.

By Suddi9

Leave a Reply

Your email address will not be published. Required fields are marked *