ಬಂಟ್ವಾಳ: ಜಿಲ್ಲೆಯಲ್ಲಿ ಮೊಳಹಳ್ಳಿ ಶಿವರಾವ್ ಮೂಲಕ ಸಹಕಾರಿ ಕ್ಷೇತ್ರಕ್ಕೆ ಭದ್ರ ಬುನಾದಿ ದೊರೆತಿದ್ದು, ಇದೇ ತಳಹದಿಯಲ್ಲಿ ಇಲ್ಲಿನ ಎಲ್ಲಾ ಸಹಕಾರಿ ಸಂಘಗಳು ಬಲಿಷ್ಠವಾಗಿ ಬೆಳೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ತಾಲ್ಲೂಕಿನ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ರೂ 80ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ‘ಸಮೃದ್ಧಿ’ ನೂತನ ಹವಾ ನಿಯಂತ್ರಿತ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.  ರಾಜ್ಯ ಸರ್ಕಾರವು ಕಡಿಮೆ ಬಡ್ಡಿ ದರ ಸಾಲ ಮತ್ತು ಬಡ್ಡಿ ಮನ್ನಾ ಯೋಜನೆಯನ್ನು ಸಹಕಾರಿ ಸಂಘಗಳ ಮೂಲಕ ರೈತರಿಗೆ ನೀಡುತ್ತಿದೆ ಎಂದು ಅವರು ತಿಳಿಸಿದರು.

*ಸಹಕಾರಿ ಕ್ಷೇತ್ರಕ್ಕೆ ಮೊಳಹಳ್ಳಿ ಶಿವರಾವ್ ಬುನಾದಿ: ಸಚಿವ ರೈ

9btl-panemnglore
*ಸ್ವಾಭಿಮಾನಿ ರೈತರು:
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ರೈತರು ಸ್ವಾಭಿಮಾನಿಗಳು. ಇದರಿಂದಾಗಿ ಎಲ್ಲಾ ಸಹಕಾರಿ ಸಂಘಗಳು ಸಾಲ ವಸೂಲಾತಿಯಲ್ಲಿ ಮುಂದಿದೆ ಎಂದರು.  ಮಾಜಿ ಶಾಸಕ  ಸಂಘದ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್, ಸ್ಕ್ಯಾಡ್ಸ್ ಸಂಸ್ಥೆ ಅಧ್ಯಕ್ಷ ಕೆ.ರವೀಂದ್ರ ಕಂಬಳಿ, ಸಂಘದ ಮಾಜಿ ಅಧ್ಯಕ್ಷ ಬಿ.ಗಣಪತಿ ಭಟ್, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲಾ ಸಂಚಾಲಕ ಎಂ. ಜನಾರ್ದನ ವಾಸುದೇವ ಭಟ್ ನರಿಕೊಂಬು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ ಆಚಾರ್ಯ ಮತ್ತಿತರರು ಶುಭ ಹಾರೈಸಿದರು.  ಸಂಘದ ಉಪಾಧ್ಯಕ್ಷ ಕೇಶವ ಪಿ.,ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ, ನಾಗೇಶ್ , ಜ್ಞಾನೇಶ್ವರ ಪ್ರಭು , ಪ್ರದೀಪ್ ಶೆಟ್ಟಿ, ನಾಗಪ್ಪ ನಾಯ್ಕ , ಸಂಜೀವ ಬಂಗೇರ, ಮಮತಾ, ಮೋಹಿನಿ ಶೆಟ್ಟಿ ಜೆ. ಮತ್ತಿತರರು ಇದ್ದರು.  ಸಂಘದ ಅಧ್ಯಕ್ಷ ಎ.ಜಯಶಂಕರ ಬಾಸ್ರಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಮೋಹನ ಪ್ರಭು ವರದಿ ವಾಚಿಸಿದರು. ನಿರ್ದೇಶಕ ಎನ್.ಶ್ರೀನಿವಾಸ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *