ವಿಟ್ಲದ ವಿಠಲ ವಿದ್ಯಾ ಸಂಘದ ಪ್ರೌಢ ಶಾಲಾ ವಿಭಾಗ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಸಹಯೋಗದೊಂದಿಗೆ ವಿಠಲ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದ ಬಹುಮಾನ ವಿತರಣಾ ಸಮಾರಂಭವು ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ತುಂಬೆ ಪ್ರೌಢ ಶಾಲೆ ಹಾಗೂ ದ್ವಿತೀಯ ಸ್ಥಾನ ಜೆಮ್ ಪಬ್ಲಿಕ್ ಸ್ಕೂಲ್ ಇವರು ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ವಿಠಲ ಪ್ರೌಢ ಶಾಲೆ ಹಾಗೂ ದ್ವಿತೀಯ ಸ್ಥಾನ ಶಾರದಾ ಪರೌಢ ಶಾಲೆ ಪಾಣೆಮಂಗಳೂರು ಇವರು ಪಡೆದಿರುತ್ತಾರೆ. ಸವ್ಯಸಾಚಿಗಳಾಗಿ ಮಹಮ್ಮದ್ ರುಮೈಝ್ ಮತ್ತು ರಮ್ಲತ್, ಉತ್ತಮ ಹೊಡೆತಗಾರರಾಗಿ ಮಸೂರ್ ಮತ್ತುತೇಜಸ್ವಿನಿ ಪ್ರಶಸ್ತಿ ಪಡೆದರು. ಈ ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ಬಾಬು ಕೊಪ್ಪಳ, ಗುರುನಾಥ ಬಾಗೆವಾಡಿ, ಉಮಾನಾಥ ರೈ, ಶಿವಪ್ರಸಾದ್ ಶೆಟ್ಟಿ, ತುಳಸಿದಾಸ್ ಶೆಣೈ, ಹೆಚ್ ಸುಬ್ರಹ್ಮಣ್ಯ ಭಟ್, ಜಯರಾಮ, ಸಂತೋಷ್ ಶೆಟ್ಟಿ, ಸುಚೇತನ್ ಜೈನ್, ಜಗದೀಶ್ ಭಾಗವಹಿಸಿ ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿದರು. ಶಿಕ್ಷಕ ಶಂಕರನಾರಾಯಣ ಪ್ರಸಾದ್ ವಂದಿಸಿದರು. ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕಿ ಮಲ್ಲಿಕಾ ಹೆಗ್ಡೆ ಸಹಕರಿಸಿದರು.

vb (1) (1)

vb (2) (1)

By suddi9

Leave a Reply

Your email address will not be published. Required fields are marked *