ಫರಂಗಿಫೇಟೆ: ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದ ಬಳಿಯಿರುವ ಟ್ರಸ್ಟ್ ನಲ್ಲಿ ದ್ವಾರ ಸೇವಾ ಸಮಿತಿ ವತಿಯಿಂದ ಯೋಗ ಶಿಬಿರವು 28 ರಂದು ಭಾನುವಾರ ಪ್ರಾರಂಭಗೊಂಡಿತು . ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಉಳ್ಳಕ್ಲು ಮಗ್ರಾಂತಾಯಿ ದ್ವಾರ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಆಳ್ವ ಕೋಶಾಧಿಕಾರಿ ರಘುನಾಥ ಪೂಜಾರಿ,ಉಪಾಧ್ಕ್ಷ ಫ್ರೆಂಕಿ ಡಿ”ಸೋಜ, ಗ್ರಾ. ಪಂ.ಉಪಾಧ್ಯಕ್ಷೆ ಆಶಾ ಪ್ರಕಾಶ್ ಆಚಾರ್ಯ ಹಾಗೂ ಯೋಗ ತರಭೇತಿದಾರ ಉದಯಕುಮಾರ್ ಶೆಟ್ಟಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

