ವಿಟ್ಲ: ಬಂಟರ ಸಂಘದ ವತಿಯಿಂದ ವಿಟ್ಲ ವರ್ಮ ಕಂಪೌಂಡಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸುಮಾರು 8 ವರ್ಷದ ಹಿಂದೆ ಮರದಿಂದ ಬಿದ್ದು ತನ್ನ ಎರಡೂ ಕಾಲುಗಳ ಸ್ವಾದೀನ ಕಳೆದುಕೊಂಡು ಮಲಗಿದಲ್ಲೇ ಇರುವ ರವಿ ಎಂಬವರಿಗೆ ಐದು ಸಾವಿರ ರೂಪಾಯಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಬಂಟರ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೂಡೂರು, ವಲಯದ ಅಧ್ಯಕ್ಷ ಭಾಸ್ಕರ ಶೆಟ್ಟಿ, ಗ್ರಾಮ ಸಮಿತಿ ಉಪಾಧ್ಯಕ್ಷ ಗೋಪಾಲ್ ಶೆಟ್ಟಿ, ಶಿವಾನಂದ ಶೆಟ್ಟಿ ಕೊಲ್ಯ, ಮತ್ತು ಪಟ್ಟಣ ಪಂಚಾಯತ್ ಸದಸ್ಯೆ ಚಂದ್ರಕಾಂತಿ ಶೆಟ್ಟಿ ಉಪಸ್ಥಿತರಿದ್ದರು.
