ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ 2014 ನೇ ಇಸವಿಯಲ್ಲಿ ವಾರಸುದಾರರು ಪತ್ತೆಯಾಗದ ದ್ವಿ ಚಕ್ರ ವಾಹನ ಸಂಖ್ಯೆ: ಕೆಎ14ಜಿ2312 ನೇ ಟಿ.ವಿ.ಎಸ್.ವಿಕ್ಟರ್,ಕೆಎ 19 ಎಚ್ 4338ನೇ ಕೆನೆಟಿಕ್ ಹೊಂಡಾ, ಕೆಎ22 ಕ್ಯೂ 6284ನೇ ಹಿರೋಹೊಂಡಾ ಮೋಟಾರ್ ವಾಹನಗಳನ್ನು ಸಾರ್ವಜನಿಕರ ಸಮಕ್ಷಮದಲ್ಲಿ ಹರಾಜು ಮಾಡಲು ಮಾನ್ಯ ನ್ಯಾಯಾಲಯವು ಆದೇಶ ಮಾಡಿದ್ದು, ಆದುದ್ದರಿಂದ ಸೆ.5ರಂದು ಬೆಳಿಗ್ಗೆ 10.00 ಗಂಟೆಗೆ ಹರಾಜು ಮಾಡಲಾಗುತ್ತದೆ ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ರಾಮ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
