ಬಂಟ್ವಾಳ: ತಾಲೂಕು ಕಛೇರಿಯಲ್ಲಿ ಉಪತಹಶೀಲ್ದಾರ್ ಆಗಿ ನಿವೃತ್ತಿಗೊಂಡ ಜೆ.ಪಿ.ರೋಡ್ರಿಗಸ್ ಹಾಗೂ ಬಿ.ಮೂಡ ಮತ್ತು ಪಾಣೆಮಂಗಳೂರು ಗ್ರಾಮ ಕರಣಿಕರಾದ ಬಸವರಾಜ ಸನದಿ ಯವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೆ ವರ್ಗಾವಣೆಗೊಂಡಿದ್ದು ಅವರ ಬೀಳ್ಕೊಡುಗೆ ಕಾರ್ಯಕ್ರಮ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಹಶೀಲ್ದಾರ್ ಪುರಂಧರ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ಜರಗಿತು.
ಉಪತಹಶೀಲ್ದಾರ್ ಗಳಾದ ಭಾಸ್ಕರ್ ರಾವ್, ಪರಮೇಶ್ವರ ನಾಯಕ್, ಕಂದಾಯ ನಿರೀಕ್ಷಕರಾದ ದಿವಾಕರ್, ರಾಮ ಕೆ., ನವೀನ್ ಮತ್ತು ತಾಲೂಕು ಕಛೇರಿ ಸಿಬ್ಬಂದಿವರ್ಗ, ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
